Dailyhunt Logo
  • Light mode
    Follow system
    Dark mode
    • Play Story
    • App Story
ಹಬ್ಬದ ಮುನ್ನವೇ ರಾಮನ ದರ್ಶನ? ರಣಬೀರ್ ಕಪೂರ್ ವರ್ಸಸ್ ಯಶ್

ಹಬ್ಬದ ಮುನ್ನವೇ ರಾಮನ ದರ್ಶನ? ರಣಬೀರ್ ಕಪೂರ್ ವರ್ಸಸ್ ಯಶ್

Karnataka TV 2 days ago

ಹು ದೊಡ್ಡ ನಿರೀಕ್ಷೆಯ ಬಿಗ್‌ ಪ್ರೋಜೆಕ್ಟ್‌ ಬಹುಭಾಷಾ ಪ್ಯಾನ್ ಇಂಡಿಯಾ ಸಿನಿಮಾ 'ರಾಮಾಯಣ: ಪಾರ್ಟ್ 1' ಈಗ ಅಂದುಕೊಂಡಿದ್ದಕ್ಕಿಂತ ಮೊದಲೇ ಥಿಯೇಟರ್‌ಗೆ ಅಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ. ರಾಮಾಯಣ: ಪಾರ್ಟ್ 1 ಅಕ್ಟೋಬರ್ 30, 2026ರ ವೇಳೆಗೆ ರಿಲೀಸ್ ಮಾಡುವಂತೆ ಹೊಸ ಪ್ಲಾನ್ ರೂಪುಗೊಂಡಿದ್ದು, ಚಿತ್ರರಂಗದಲ್ಲಿ ಈಗಲೇ ಹೈಪ್ ಹೈ ವೋಲ್ಟೇಜ್ ಆಗಿದೆ.

ರಣಬೀರ್ ಕಪೂರ್, ರಾಕಿಂಗ್‌ ಸ್ಟಾರ್‌ ಯಶ್‌, ಸಾಯಿ ಪಲ್ಲವಿ ಮತ್ತು ಸನ್ನಿ ಡಿಯೋಲ್ ಕಾಂಬಿನೇಷನ್‌ನ ಈ ಬಿಗ್ ಬಜೆಟ್ ಸಿನಿಮಾ ಮೊದಲು ದೀಪಾವಳಿ ವಾರಕ್ಕೆ ಫಿಕ್ಸ್ ಆಗಿತ್ತು. ಆದರೆ ಈಗ ತಂಡ ಒಂದು ವಾರ ಮುಂಚಿತ ರಿಲೀಸ್ ಪ್ಲಾನ್ ಮಾಡಿಕೊಂಡಿದ್ದು, ಹಬ್ಬಕ್ಕೂ ಮುನ್ನವೇ ಬಾಯ್ಮಾತಿನ ಪ್ರಚಾರ (word of mouth) ಮೂಲಕ ಸಿನಿಮಾ ಹಿಡಿತ ಸಾಧಿಸುವ ತಂತ್ರ ಹಾಕಿಕೊಂಡಿದೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಲೆಕ್ಕಾಚಾರದಂತೆ ಮೊದಲ ವಾರದ ರೆಸ್ಪಾನ್ಸ್ ಬಲವಾಗಿದ್ದರೆ, ದೀಪಾವಳಿ ರಜಾ ವಾರದಲ್ಲಿ ಕಲೆಕ್ಷನ್ ಡಬಲ್ ಆಗುವ ನಿರೀಕ್ಷೆ ಇದೆ. ಈಗಾಗಲೇ ವಿತರಕರೊಂದಿಗೆ ಸುಮಾರು ₹450 ಕೋಟಿ ಬಿಸಿನೆಸ್ ಡೀಲ್ ಚರ್ಚೆ ನಡೆಯುತ್ತಿದ್ದು, ಅಂತಿಮ ಒಪ್ಪಂದವಾದ ನಂತರ ಹೊಸ ರಿಲೀಸ್ ಡೇಟ್ ಅಧಿಕೃತವಾಗಲಿದೆ.

ಈ ಬದಲಾವಣೆಯ ನೇರ ಪರಿಣಾಮ ಈಗ ಯಶ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' ಮೇಲೂ ಬೀಳುವ ಸಾಧ್ಯತೆ ಇದೆ. 'ರಾಮಾಯಣ' ಅಕ್ಟೋಬರ್ ಅಂತ್ಯದಲ್ಲಿ ಬರಲಿರುವುದರಿಂದ, 'ಟಾಕ್ಸಿಕ್' ಅನ್ನು ಕನಿಷ್ಠ ಆಗಸ್ಟ್ ವೇಳೆಗೆ ರಿಲೀಸ್ ಮಾಡಬೇಕಾದ ಒತ್ತಡ ನಿರ್ಮಾಣವಾಗಿದೆ. ಇಲ್ಲದಿದ್ದರೆ ಎರಡು ಸಿನಿಮಾಗಳ ಹೈಪ್ ಮತ್ತು ಬಾಕ್ಸ್ ಆಫೀಸ್ ಕಲೆಕ್ಷನ್ ಎರಡಕ್ಕೂ ಹೊಡೆತ ಬೀಳಬಹುದು ಎಂದು ಚಿತ್ರರಂಗದ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಇದೀಗ 'ರಾಮಾಯಣ' ಭಾಗ 2 ಅನ್ನು 2027ರ ದೀಪಾವಳಿಗೆ ರಿಲೀಸ್ ಮಾಡುವಂತೆ ಪ್ಲಾನ್ ಮಾಡಲಾಗುತ್ತಿದ್ದು, ದೊಡ್ಡ ಫ್ರಾಂಚೈಸ್ ರೂಪದಲ್ಲಿ ಪ್ರಾಜೆಕ್ಟ್ ಮುಂದುವರಿಯಲಿದೆ ಎಂದು ವರದಿಯಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV