Dailyhunt Logo
  • Light mode
    Follow system
    Dark mode
    • Play Story
    • App Story
IIT-IIM ಪದವೀಧರರ ಸಾಹಸ! ಅಮೆರಿಕದ ಉದ್ಯೋಗ ತೊರೆದು ಬೆಂಗಳೂರಿನಲ್ಲಿ ಸ್ವಂತ ಕೆಫೆ

IIT-IIM ಪದವೀಧರರ ಸಾಹಸ! ಅಮೆರಿಕದ ಉದ್ಯೋಗ ತೊರೆದು ಬೆಂಗಳೂರಿನಲ್ಲಿ ಸ್ವಂತ ಕೆಫೆ

Karnataka TV 1 week ago

ದೇಶದ ಪ್ರತಿಷ್ಠಿತ ಐಐಟಿ ಮತ್ತು ಐಐಎಂ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿ, ಅಮೆರಿಕದಲ್ಲಿ ಹೆಚ್ಚಿನ ಸಂಬಳದ ಉದ್ಯೋಗದಲ್ಲಿದ್ದ ಇಬ್ಬರು ಸ್ನೇಹಿತರು ಇದೀಗ ತಮ್ಮ ಕನಸಿನ ಉದ್ಯಮಕ್ಕಾಗಿ ಎಲ್ಲವನ್ನೂ ತೊರೆದು ಬೆಂಗಳೂರಿನಲ್ಲಿ ಸ್ವಂತ ಕೆಫೆ ಆರಂಭಿಸಿದ್ದಾರೆ. ಇವರ ಈ ಸಾಹಸಮಯ ನಿರ್ಧಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸುದ್ದಿಯಲ್ಲಿದೆ.

ಐಐಟಿ ಖರಗ್‌ಪುರ ಮತ್ತು ಐಐಎಂ ಬೆಂಗಳೂರು ಪದವೀಧರರಾಗಿರುವ ಇಬ್ಬರು ಸ್ನೇಹಿತರು ಅಮೆರಿಕದ ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರು. ಉತ್ತಮ ಸಂಬಳ, ವಿದೇಶಿ ಜೀವನಶೈಲಿ ಹಾಗೂ ಭವಿಷ್ಯದ ಭದ್ರತೆ ಇದ್ದರೂ, ತಮ್ಮದೇ ಉದ್ಯಮ ಕಟ್ಟುವ ಕನಸಿನೊಂದಿಗೆ ಉದ್ಯೋಗಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಮರಳಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ವಂತ ಕೆಫೆ ಆರಂಭಿಸಿರುವ ಈ ಸ್ನೇಹಿತರು, ಹೊಸ ರೀತಿಯ ಉದ್ಯಮದ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿದ್ದಾರೆ. ಇವರ ಈ ಸಾಹಸ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವ ಉದ್ಯಮಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಸಾಮಾನ್ಯವಾಗಿ ಐಐಟಿ ಹಾಗೂ ಐಐಎಂ ಪದವೀಧರರು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ಗುರಿಯಾಗಿಟ್ಟುಕೊಳ್ಳುತ್ತಾರೆ.

ಆದರೆ ಈ ಯುವಕರು ಸುರಕ್ಷಿತ ಉದ್ಯೋಗದ ಹಾದಿ ಬಿಟ್ಟು, ಸ್ವಂತ ಉದ್ಯಮದ ಕನಸನ್ನು ನನಸಾಗಿಸಲು ಮುಂದಾಗಿರುವುದು ಅನೇಕರ ಮೆಚ್ಚುಗೆಗೆ ಕಾರಣವಾಗಿದೆ. ಒಟ್ಟಾರೆ, ಹೆಚ್ಚು ಸಂಬಳದ ಉದ್ಯೋಗಕ್ಕಿಂತ ತಮ್ಮ ಕನಸು ಮತ್ತು ಆಸಕ್ತಿಗೆ ಆದ್ಯತೆ ನೀಡಿರುವ ಈ ಇಬ್ಬರು ಸ್ನೇಹಿತರ ಕಥೆ, ಹೊಸದನ್ನು ಸಾಧಿಸಲು ಬಯಸುವ ಯುವಕರಿಗೆ ಸ್ಫೂರ್ತಿಯಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV