Dailyhunt Logo
  • Light mode
    Follow system
    Dark mode
    • Play Story
    • App Story
ಕಾವೇರಿ ಕಿಚ್ಚು - ಕರ್ನಾಟಕದಲ್ಲಿ ವಿಜಯ್ 'ಜನನಾಯಕನ್' ಸಿನಿಮಾ ಎತ್ತಂಗಡಿ!

ಕಾವೇರಿ ಕಿಚ್ಚು - ಕರ್ನಾಟಕದಲ್ಲಿ ವಿಜಯ್ 'ಜನನಾಯಕನ್' ಸಿನಿಮಾ ಎತ್ತಂಗಡಿ!

Karnataka TV 3 weeks ago

ರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರು ಹಂಚಿಕೆ ವಿವಾದದ ಬಿಸಿ ಈಗ ಸ್ಯಾಂಡಲ್‌ವುಡ್ ಹಾಗೂ ಚಿತ್ರರಂಗಕ್ಕೂ ತಟ್ಟಿದೆ. ತಮಿಳಿನ ಖ್ಯಾತ ನಟ ವಿಜಯ್ ಅಭಿನಯದ ಬಹುನಿರೀಕ್ಷಿತ 'ಜನನಾಯಕನ್' ಸಿನಿಮಾದ ಪ್ರದರ್ಶನವನ್ನು ಕರ್ನಾಟಕದಾದ್ಯಂತ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯದಲ್ಲಿ ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಉಗ್ರ ಪ್ರತಿಭಟನೆಗಳನ್ನು ನಡೆಸುತ್ತಿವೆ. ಇದರ ಪರಿಣಾಮವಾಗಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಚಿತ್ರಮಂದಿರಗಳ ಮಾಲೀಕರು ಸ್ವಯಂಪ್ರೇರಿತರಾಗಿ 'ಜನನಾಯಕನ್' ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ಥಿಯೇಟರ್‌ಗಳ ಮುಂದಿದ್ದ ವಿಜಯ್ ಅವರ ಬ್ಯಾನರ್, ಕಟೌಟ್ ಮತ್ತು ಪೋಸ್ಟರ್‌ಗಳನ್ನು ಕೂಡ ತೆಗೆದು ಹಾಕುವುದರ ಜೊತೆಗೆ ಹರಿದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ರಾಜಧಾನಿ ಬೆಂಗಳೂರಿನ ಪ್ರಸಿದ್ಧ ಉರ್ವಶಿ ಚಿತ್ರಮಂದಿರದಲ್ಲಿ ಪೊಲೀಸರ ಸಲಹೆಯ ಮೇರೆಗೆ ಈ ಸಿನಿಮಾದ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ವಿಶೇಷ ಅಂದ್ರೆ, ಅಲ್ಲಿಗೆ ನಿಗದಿಯಾಗಿದ್ದ ಶೋಗಳ ಜಾಗದಲ್ಲಿ ಈಗ ಕನ್ನಡದ 'ಕರಾವಳಿ' ಚಿತ್ರವನ್ನು ಪ್ರದರ್ಶಿಸಲಾಗುತ್ತಿದ್ದು, ಥಿಯೇಟರ್ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಇನ್ನು ಕಾವೇರಿ ಹೋರಾಟದ ಕೇಂದ್ರಬಿಂದುವಾಗಿರುವ ಮಂಡ್ಯದಲ್ಲೂ ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿ, ಚಿತ್ರದ ಪೋಸ್ಟರ್‌ಗಳನ್ನು ಹರಿದುಹಾಕಿದ್ದಾರೆ ಎಂದು ತಿಳಿದುಬಂದಿದೆ.

ಎಚ್. ವಿನೋದ್ ನಿರ್ದೇಶನದ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ರಾಜಕೀಯ ಆಕ್ಷನ್ ಡ್ರಾಮಾ ಚಿತ್ರವು ಸುಮಾರು 125 ರಿಂದ 150 ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿತ್ತು. ಆದ್ರೀಗ ಕಾವೇರಿ ವಿವಾದದಿಂದಾಗಿ ಚಿತ್ರದ ಪ್ರದರ್ಶನಕ್ಕೆ ತೀವ್ರ ಅಡಚಣೆ ಉಂಟಾಗಿದ್ದು, ಗಲ್ಲಾಪೆಟ್ಟಿಗೆಯ ಕಲೆಕ್ಷನ್ ಮೇಲೂ ಭಾರೀ ಪರಿಣಾಮ ಬೀರುವ ಸಾಧ್ಯತೆಯಿದೆ. ರಾಜ್ಯದ ಹಿತವೇ ನಮಗೆ ಮುಖ್ಯ ಎಂಬ ನಿಟ್ಟಿನಲ್ಲಿ ಕನ್ನಡಿಗರು ಮತ್ತು ಸಂಘಟನೆಗಳು ಈ ವಿರೋಧ ವ್ಯಕ್ತಪಡಿಸುತ್ತಿದ್ದು, ಕಾವೇರಿ ಹೋರಾಟದ ಮುಂದೆ ಚಿತ್ರರಂಗದ ಈ ಪರಿಸ್ಥಿತಿ ಅನಿವಾರ್ಯವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV