Dailyhunt
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಖಮೇನಿಗೆ ಸಂತಾಪ ಸಲ್ಲಿಕೆ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ..

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಖಮೇನಿಗೆ ಸಂತಾಪ ಸಲ್ಲಿಕೆ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ..

Karnataka TV 1 week ago

Political News: ಕಲಬುರಗಿಯ ಮಹಾನಗರ ಪಾಲಿಕೆ ಸಭೆಯಲ್ಲಿ ಬಜೆಟ್ ಶುರುವಾಗುವ ಮುನ್ನ ಇರಾನ್ ಸರ್ವೋಚ್ಛ ನಾಯಕ ಖಮೇನಿ ಸಾವಿಗೆ ಸಂತಾಪ ಸೂಚಿಸಲಾಗಿತ್ತು.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಸನಗೌಡ ಪಾಟೀಲ್ ಯತ್ನಾಳ್, ಕಲಬುರಗಿಯ ಮಹಾನಗರ ಪಾಲಿಕೆ ಸಭೆಯಲ್ಲಿ ಇರಾನ್ ನ ನಿರಂಕುಶ ಪ್ರಭೃತವಾದಿ, ಪ್ರಜಾ ಪೀಡಕ, ಮಹಿಳಾ ಹಕ್ಕುಗಳನ್ನು ಕಸಿದಿದ್ದ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ಹತ್ಯೆಗೆ ಶಿಷ್ಟಾಚಾರವನ್ನು ಬಲ್ಲ ಆಯುಕ್ತರೂ ಸೇರಿ ಇತರೆ ಸದಸ್ಯರು ಸಂತಾಪ ಸೂಚಿಸಿರುವುದು ಇವರ ಬೌದ್ಧಿಕ ದಾರಿದ್ರ್ಯತನ ಹಾಗೂ ಬುದ್ದಿಗೇಡಿತನ ಸೂಚಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಹಲ್ಗಾಮ್, ಕಾಶ್ಮೀರಿ ಪಂಡಿತರು, ದೇಶದ ಗಾಡಿಯನ್ನು ರಕ್ಷಣೆ ಮಾಡುವ ಸಮಯದಲ್ಲಿ ಪ್ರಾಣವನ್ನರ್ಪಿಸಿದ ವೀರ ಯೋಧರಿಗೆ ಮಿಡಿಯದ ಕಂಬನಿ, ಖಮೇನಿ ಸತ್ತಾಗ ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಿದ್ದು ಖಂಡನೀಯ ಎಂದು ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಯುಕ್ತರು ಸೇರಿದಂತೆ ಸದಸ್ಯರ ಮೇಲೆ ಸರ್ಕಾರ ಕೂಡಲೇ ಕ್ರಮ ಕೈಗೊಂಡು ತಾವು ವಾಸಿಸುತ್ತಿರುವ ನೆಲ, ಸಂಸ್ಕೃತಿಗೆ ಬೆಲೆ ಕೊಟ್ಟು ವರ್ತಿಸಬೇಕೇ ಹೊರತು ಬೇರೆ ರಾಷ್ಟ್ರದ ಪ್ರಜೆಗಳಂತೆ ವರ್ತಿಸುವುದನ್ನು ನಿಲ್ಲಿಸಬೇಕು ಎಂದು ಬಸನಗೌಡ ಪಾಟೀಲ್ ಯತ್ನಳ್ ಆಗ್ರಹಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV