Dailyhunt
ಕಲುಷಿತ ನೀರಿನಿಂದ ಬೆಳೆ ಹಾಳಾಗುತ್ತಿದೆ ಪರಿಹಾರ ನೀಡಿ..

ಕಲುಷಿತ ನೀರಿನಿಂದ ಬೆಳೆ ಹಾಳಾಗುತ್ತಿದೆ ಪರಿಹಾರ ನೀಡಿ..

Karnataka TV 4 years ago

www.karnatakatv.net : ಬೆಳಗಾವಿ: ಹಲವು ದಿನಗಳಿಂದ ಸತತವಾಗಿ ಮಳೆ ಬೀಳುತ್ತಿರುವುದರಿಂದ ನಗರದಲ್ಲಿನ ಕಲುಷಿತ ನೀರು ಮತ್ತು ಪ್ಲಾಸ್ಟಿಕ್ ವಸ್ತುಗಳು ಬಂದು ಲೇಂಡಿ ನಾಲಾ ಸೇರುತ್ತದೆ. ಮತ್ತು ನಾಲದ ಅಕ್ಕ ಪಕ್ಕದ ಮನೆಗಳ ಮುಂದೆ ಗಲೀಜು ನೀರಿನಿಂದ ಕೆಟ್ಟ ವಾಸನೆ ಬರುತ್ತಿದೆ.ಆದ್ದರಿಂದ ಲೇಂಡಿ ನಾಲಾ ಗಾಂಧಿನಗರ ಮತ್ತು ಗೋಕುಳ ನಗರದಲ್ಲಿ ಹಾದು ಹೋಗಿದ್ದು ಸರಿಪಡಿಸುವಂತೆ ಶಾಸಕರಿಗೆ ಮನವಿ ಮಾಡಿಕೊಂಡರು.

ಗೋಕುಳ ನಗರದಲ್ಲಿ ಪಕ್ಕದ ರೈತರ ಜಮೀನುಗಳಲ್ಲಿ ಕಲುಷಿತ ನೀರು ಹೋಗಿ ಬೆಳೆ ನಾಶವಾಗುತ್ತಿವೆ ಎಂದು ಶಾಸಕರ ಮುಂದೆ ರೈತರು ಅಕ್ರೋಶ ವ್ಯಕ್ತಪಡಿಸಿದರು.

ತದನಂತರ ಮಾತನಾಡಿದ ಶಾಸಕ ಅನಿಲ್ ಬೆನಕೆ ಅವರು ಗಾಂಧಿನಗರ ಮತ್ತು ಗೋಕುಳ ನಗರಕ್ಕೆ ತಹಶಿಲ್ದಾರ ಮತ್ತು ನಾವು ಭೇಟಿ ನೀಡಿ ರೈತರ ಸಮಸ್ಯೆ ಕುರಿತು ತಿಳಿದುಕೊಂಡಿದ್ದೆವೆ. ಮುಂದಿನ ದಿನಗಳಲ್ಲಿ ಪರಿಹಾರ ನೀಡುವ ಭರವಸೆ ಕೊಟ್ಟಿದ್ದೆವೆ.ಆದರೆ ಬಳ್ಳಾರಿ ನಾಲಾಕ್ಕೆ ಸೇರುವ ಸಣ್ಣ ಸಣ್ಣ ನಾಲಾಗಳಿವೆ ಅವುಗಳಿಂದ ಅಕ್ಕಪಕ್ಕದ ರೈತರ ಜಮೀನುಗಳಿಗೆ ತೋಂದರೆ ಆಗಿದೆ ಇದರಿಂದ ರೈತರ ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಪರಿಹಾರ ನೀಡಲು ಸೂಚನೆ ನೀಡುತ್ತೆನೆ ಎಂದರು.

ಆದರೆ ನಾಲಾಗಳಲ್ಲಿ ಮಣ್ಣು ಹಾಕಿ ಬಂದ್ ಮಾಡುವುದರಿಂದ ರೈತರಿಗೆ ಮತ್ತು ಜನರಿಗೆ ತೊಂದರೆ ಆಗುವ ರೀತಿಯಲ್ಲಿ ನಾಲಾಗಳನ್ನು ಮಣ್ಣು ಹಾಕಿ ಮುಚ್ಚುವುರಿಂದ ಸಮಸ್ಯೆ ಆಗುತ್ತದೆ ಹೀಗಾಗಿ ಮಣ್ಣು ಹಾಕುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳತ್ತೆವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಹುಲ್ ಮೋರೆ,ಮಹೇಶ ಬಡಮಂಜಿ, ಸುನೀಲ್ ಜಾಧವ, ಮಹಾವೀರ ಜಕ್ಕನ್ನವರ,ನಾರಾಯಣ ಸಾವಂತ, ಇನ್ನು ಹಲವಾರು ರೈತರು ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Karnataka TV