Dailyhunt Logo
  • Light mode
    Follow system
    Dark mode
    • Play Story
    • App Story
ಕರ್ನಾಟಕ ಬಿಸಿನೆಸ್ ಅವಾರ್ಡ್ಸ್ 2026 ಸಂಭ್ರಮ: ಸಾಧಕ ನವೋದ್ಯಮಿಗಳಿಗೆ ಸನ್ಮಾನ

ಕರ್ನಾಟಕ ಬಿಸಿನೆಸ್ ಅವಾರ್ಡ್ಸ್ 2026 ಸಂಭ್ರಮ: ಸಾಧಕ ನವೋದ್ಯಮಿಗಳಿಗೆ ಸನ್ಮಾನ

Karnataka TV 17 hrs ago

ಬೆಂಗಳೂರು ನಗರದ ತ್ರಿಪುರ ವಾಸಿನಿಯಲ್ಲಿ ಕರ್ನಾಟಕ ಟ್ರೇಡ್ ಚೇಂಬರ್ಸ್ ಆಫ್ ಕಾಮರ್ಸ್ ವತಿಯಿಂದ ಕರ್ನಾಟಕ ಬಿಸಿನೆಸ್ ಅವಾರ್ಡ್ಸ್ 2026 ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾದ ನವೋದ್ಯಮಿಗಳು ಮತ್ತು ಸಾಧಕರನ್ನು ಗುರುತಿಸಿ, ವಿವಿಧ ಬಿಸಿನೆಸ್ ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕರ್ನಾಟಕ ಬಿಸಿನೆಸ್ ಅವಾರ್ಡ್ಸ್ ಅದ್ಧೂರಿ ಉದ್ಘಾಟನೆ

ಉದ್ಯಮ, ನವೀನತೆ ಮತ್ತು ಯುವ ಉದ್ಯಮಿಗಳ ಸಾಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿದರು. ಉದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಸಂಸ್ಥೆಗಳು ಹಾಗೂ ಉದ್ಯಮಿಗಳಿಗೆ ವಿಶೇಷ ಗೌರವ ನೀಡಲಾಯಿತು.

ಗಣ್ಯರ ಸಮ್ಮುಖದಲ್ಲಿ ಜಗಮಗಿಸಿದ ನವೋದ್ಯಮದ ಹಬ್ಬ

ಕಾರ್ಯಕ್ರಮವನ್ನು ಸಚಿವ ದಿನೇಶ್ ಗುಂಡು ರಾವ್ ಉದ್ಘಾಟಿಸಿದರು. ಇದೇ ವೇಳೆ ನಿರ್ಮಾಪಕ ಸಂಜಯ್ ಗೌಡ ಹಾಗೂ ಕರ್ನಾಟಕ ಟಿವಿ ಮುಖ್ಯಸ್ಥ ಕೆ. ಎಂ. ಶಿವಕುಮಾರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.

ಬೆಂಗಳೂರಲ್ಲಿ ಜಗಮಗಿಸಿದ ಉದ್ಯಮ ನಕ್ಷತ್ರಗಳು

ಉದ್ಯಮ ಕ್ಷೇತ್ರದಲ್ಲಿ ಹೊಸ ಆಲೋಚನೆಗಳು ಮತ್ತು ಸ್ಟಾರ್ಟ್‌ಅಪ್ ಸಂಸ್ಕೃತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಂತಹ ಪ್ರಶಸ್ತಿ ಕಾರ್ಯಕ್ರಮಗಳು ಯುವ ಉದ್ಯಮಿಗಳಿಗೆ ಮತ್ತಷ್ಟು ಸ್ಪೂರ್ತಿ ನೀಡಲಿವೆ ಎಂಬ ಅಭಿಪ್ರಾಯವೂ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

Dailyhunt
Disclaimer: This content has not been generated, created or edited by Dailyhunt. Publisher: Karnataka TV