Dailyhunt
Karwar: ಸ್ನೇಹಿತನ ತಾಯಿಗೆ ಅನಾರೋಗ್ಯವೆಂದು ಔಷಧಿ ತರಲು ಹೋಗಿ, ಅಪಘಾತದಲ್ಲಿ ಸಾ*

Karwar: ಸ್ನೇಹಿತನ ತಾಯಿಗೆ ಅನಾರೋಗ್ಯವೆಂದು ಔಷಧಿ ತರಲು ಹೋಗಿ, ಅಪಘಾತದಲ್ಲಿ ಸಾ*

Karnataka TV 1 week ago

Karwar News: ಕಾರವಾರ: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೊನ್ನಾವರ ತಾಲೂಕಿನ ಅಪ್ಸರಕೊಂಡ ಬಳಿ ನಡೆದಿದೆ.

ಕಿರಣ ಬಾಲಚಂದ್ರ‌ ನಾಯ್ಕ (25)ಮೃತ ಯುವಕನಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.

ಇಡಗುಂಜಿಯಿಂದ ಹೊನ್ನಾವರಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಈತ ಸ್ನೇಹಿತನ ತಾಯಿಗೆ ಅನಾರೋಗ್ಯ ಹಿನ್ನಲೆ ಔಷಧಿ ತಲುಪಿಸಲು ತೆರಳುತ್ತಿದ್ದನಂತೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV