Dailyhunt Logo
  • Light mode
    Follow system
    Dark mode
    • Play Story
    • App Story
ಕತ್ತೆಗೆ ಪೂಜೆ ಮಾಡಿ ವಿಜಯದಶಮಿ ಆಚರಿಸಿದ ವಾಟಾಳ್ ನಾಗರಾಜ್!

ಕತ್ತೆಗೆ ಪೂಜೆ ಮಾಡಿ ವಿಜಯದಶಮಿ ಆಚರಿಸಿದ ವಾಟಾಳ್ ನಾಗರಾಜ್!

Karnataka TV 1 day ago

ಬೆಂಗಳೂರಿನಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ವಿಜಯದಶಮಿಯನ್ನು ಅತ್ಯಂತ ವಿಭಿನ್ನವಾಗಿ ಆಚರಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಕತ್ತೆಗೆ ಪೂಜೆ ಸಲ್ಲಿಸುವ ಮೂಲಕ ಕನ್ನಡಪರ ಮುಖಂಡರು ವಿನೂತನ ಹಾಗೂ ಗಮನಸೆಳೆಯುವ ಪ್ರತಿಭಟನೆ ನಡೆಸಿದ್ದಾರೆ.

ಇಡೀ ನಾಡು ಸುಖ, ಶಾಂತಿ ಮತ್ತು ಸಂತೋಷದಿಂದ ಸಾಗಬೇಕು ಹಾಗೂ ಸಮಗ್ರ ಕರ್ನಾಟಕ ಸಮೃದ್ಧರಿತವಾಗಬೇಕು ಎಂದು ಆಶಿಸಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಗಣಪತಿ ಹಬ್ಬಗಳು ಹಾಗೂ ವಾದ್ಯಗೋಷ್ಠಿ ಹಾಡುಗಳು ಕೇವಲ ಕನ್ನಡದಲ್ಲೇ ಇರಬೇಕು. ಪರಭಾಷಾ ಚಿತ್ರಗಳು ಹಾಗೂ ಪರಭಾಷಾ ಹಾಡುಗಳನ್ನು ನಿಷೇಧಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಕರ್ನಾಟಕ ಏಕೀಕರಣಗೊಂಡು 70 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಮುಂಬರುವ ನವೆಂಬರ್ 1 ರ ರಾಜ್ಯೋತ್ಸವದ ದಿನದಂದು ರಾಜ್ಯದ ಎಲ್ಲೆಲ್ಲೂ ಕನ್ನಡ ಕಂಪು ಮೊಳಗಬೇಕು ಮತ್ತು ಕನ್ನಡ ಬಾವುಟ ಹೆಮ್ಮೆಯಿಂದ ಹಾರಾಡಲೇಬೇಕು ಎಂದು ವಾಟಾಳ್ ನಾಗರಾಜ್ ಕಹಳೆ ಮೊಳಗಿಸಿದ್ದಾರೆ.

ಈ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡ ಸೇನೆಯ ರಾಜ್ಯಾಧ್ಯಕ್ಷರಾದ ಕೆ.ಆರ್. ಕುಮಾರ್, ಕನ್ನಡಪರ ಹೋರಾಟಗಾರರಾದ ಹೆಚ್.ವಿ. ಗಿರೀಶ್‌ಗೌಡ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ಕನ್ನಡ ಪರ ಘೋಷಣೆಗಳನ್ನು ಕೂಗಿದರು.

Dailyhunt
Disclaimer: This content has not been generated, created or edited by Dailyhunt. Publisher: Karnataka TV