Dailyhunt Logo
  • Light mode
    Follow system
    Dark mode
    • Play Story
    • App Story
Life Lesson: ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ನೀವು ದುರ್ಬಲರು ಎಂದರ್ಥ

Life Lesson: ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ನೀವು ದುರ್ಬಲರು ಎಂದರ್ಥ

Karnataka TV 1 week ago

Life Lesson: ಕೆಲವು ಗುಣಗಳು ನಮ್ಮ ಜೀವನದ ನೆಮ್ಮದಿಗಳನ್ನೇ ಕಸಿಯುತ್ತದೆ. ಅಂಥ ಗುಣವನ್ನು ನಾವು ಆದಷ್ಟು ಬಿಡುವ ಪ್ರಯತ್ನ ಮಾಡಬೇಕು. ಇಲ್ಲವಾದಲ್‌ಲಿ ನಾವು ನಮ್ಮ ಜೀವನದಲ್ಲಿ ದುರ್ಬಲರಾಗುತ್ತ ಹೋಗುತ್ತೇವೆ. ಹಾಗಾದ್ರೆ ಆ ಗುಣಗಳು ಯಾವುದು ಎಂದು ತಿಳಿಯೋಣ ಬನ್ನಿ..

ಕೋಪ: ಕೋಪದಲ್ಲಿ ಒಡೆದ ಗಾಜನ್ನು ಮತ್ತೆ ಅಂಟಿಸಲು ಸಾಧ್ಯವಾಗುವುದಿಲ್ಲ. ಅಂಟಿಸಿದರು ಮುಂಚಿನ ರೀತಿಯಲ್ಲಿ ನಾವು ಪ್ರತಿಬಿಂಬ ಕಾಣಲು ಸಾಧ್ಯವಿಲ್ಲ. ಅದೇ ರೀತಿ ಕೋಪ ಅನ್ನೋದು ದುರ್ಬಲ ತೀರ್ಪು ತೆಗೆದುಕ"ಳ್ಳಲು ಕಾರಣವಾಗುತ್ತದೆ. ಅಲ್ಲದೇ ಕೋಪದಲ್ಲಿರುವವನ ಹತ್ತಿರ ಯಾರೂ ಬರಲು ಇಚ್ಛಿಸುವುದಿಲ್ಲ. ಆತ ಅನಾಥನ ರೀತಿಯೇ ಇರಬೇಕಾಗುತ್ತದೆ. ಹಾಗಾಗಿ ಕೋಪ ಇರುವ ಮನುಷ್ಯ ಸದಾ ದುರ್ಬಲ ಅಂತಲೇ ಹೇಳಲಾಗುತ್ತದೆ.

ಅಸೂಯೆ: ಬೇರೆಯವರ ಯಶಸ್ಸು, ಖುಷಿ ನೋಡಿ ನಿಮಗೆ ಅಸೂಯೆ ಉಂಟಾಗುತ್ತಿದ್ದರೆ ನೀವು ದುರ್ಬಲರು ಎಂದರ್ಥ. ತನ್ನ ಖರ್ಚು ನಿಭಾಯಿಸುವವನು, ತನ್ನ ಖುಷಿ ತಾನು ಕಂಡುಕ"ಳ್ಳಲು ಪ್ರಯತ್ನಿಸುವವನು, ಕಾಳಜಿ,ಕರುಣೆ, ಪ್ರೀತಿ ಗುಣ ಉಳ್ಳವನು ಎಂದಿಗೂ ಇತರರನ್ನು ನೋಡಿ ಅಸೂಯೆ ಪಡುವುದಿಲ್ಲ. ಆತ ಅಸೂಯೆ ಪಡುವವನೇ ಆಗಿದ್ದಲ್ಲಿ, ಆತ ದುರ್ಬಲ ಎಂದರ್ಥ.

ದುರಾಸೆ: ತನ್ನ ಬಳಿ ಸಾಕಷ್ಟು ಇದ್ದರೂ, ಇನ್ನೂ ಬೇಕೂ, ಮತ್ತೂ ಬೇಕೂ, ಸಾಕಾಗದು ಎನ್ನುವವರು ದುರ್ಬಲರು. ಈ ದುರಾಸೆಯಿಂದಲೇ ಜನ ಆತನನ್ನು ದೂಷಿಸಲು, ದೂರ ಮಾಡಲು ಶುರು ಮಾಡುತ್ತಾರೆ. ಪ್ರೀತಿ, ಕಾಳಜಿ ತೋರುವುದನ್ನು ನಿಲ್ಲಿಸುತ್ತಾರೆ. ಹಾಗಾಗಿ ದುರಾಸೆ ಮಾಡುವವ ದುರ್ಬಲ ಎನ್ನಲಾಗಿದೆ.

ಭಯ: ಜೀವನದಲ್ಲಿ ಏನೇ ಸಮಸ್ಯೆ ಬಂದರೂ ನಾನು ಎದುರಿಸಬಲ್ಲೆ ಅನ್ನೋ ಧೈರ್ಯ ಮನುಷ್ಯನಿಗೆ ಇರಬೇಕು. ಹಾಗೇನಾದರೂ ಧೈರ್ಯ ಇಲ್ಲದಿದ್ದಲ್ಲಿ, ಭಯವೇ ಹೆಚ್ಚಾಗಿದ್ದಲ್ಲಿ ಆತ ದುರ್ಬಲ ಎಂದರ್ಥ.

ಅಶಿಸ್ತು: ಮನುಷ್ಯ ಜೀವನದಲ್ಲಿ ಉದ್ಧಾರವಾಗಬೇಕು. ಚೆನ್ನಾಗಿ ದುಡಿದು ಶ್ರೀಮಂತನಾಗಬೇಕು. ನೆಮ್ಮದಿಯಾಗಿರಬೇಕು ಅಂದ್ರೆ, ಆತ ಜೀವನದಲ್ಲಿ ಶಿಸ್ತಿನಿಂದಿರುವುದು ಮುಖ್ಯ. ಆತ ಶಿಸ್ತಿನಿಂದ ಇಲ್ಲದಿದ್ದಲ್ಲಿ, ಆತನೆಂದಿಗೂ ಪ್ರಬಲನಾಗುವುದಿಲ್ಲ.

ಅಹಂಕಾರ: ಯಾವ ಮನುಷ್ಯ ಅಹಂಕಾರದಿಂದ ಮೆರೆಯುತ್ತಾನೋ, ಆತನೆಂದಿಗೂ ಪ್ರಬಲನಾಗಲು ಸಾಧ್ಯವಿಲ್ಲ. ಆತ ಸದಾ ದುರ್ಬಲನೇ. ಏಕೆಂದರೆ, ಪ್ರಬಲರು, ಯಶಸ್ವಿ ವ್ಯಕ್ತಿಗಳು ತುಂಬಿದ ಬಿಂದಿಗೆ ಇದ್ದಂತೆ, ಅವರು ಹೆಚ್ಚು ಸದ್ದು ಮಾಡುವುದಿಲ್ಲ. ಯಶಸ್ಸು ಸಾಧಿಸುವ ಯೋಗ್ಯತೆ ಇಲ್ಲದವರು ಅಹಂಕಾರಪಡುತ್ತಾರೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV