Dailyhunt
Mandya: ಬೆಕ್ಕಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ಮೆರೆದ ನಾಯಿ

Mandya: ಬೆಕ್ಕಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ಮೆರೆದ ನಾಯಿ

Karnataka TV 1 week ago

Shrirangapattana: ಶ್ರೀರಂಗಪಟ್ಟಣ: ನಾಯಿಯ ಮೊಲೆಯಲ್ಲಿ ಹಾಲಿದ್ದರೇನು ಭಾಗ್ಯ ಎಂದು ಮೂದಲಿಕೆ ಮಾಡುತ್ತಿದ್ದವರಿಗೆ ಇದು ಅಪವಾದ ಎಂಬಂತೆ ಮಂಡ್ಯದಲ್ಲಿ ಶ್ವಾನವೊಂದು ಬೆಕ್ಕಿನ ಮರಿಗೆ ಹಾಲುಣಿಸುವ ಮೂಲಕ ತಾಯ್ತನ ಮೆರೆದಿದೆ.

ನಾಯಿ ಮತ್ತು ಬೆಕ್ಕು ಬದ್ಧ ವೈರಿಗಳಂತೆ ಇರುತ್ತಾರೆ.

ನಾಯಿಯನ್ನು ಕಂಡರೆ ಬೆಕ್ಕಿಗಾಗುವುದಿಲ್ಲ. ಬೆಕ್ಕನ್ನು ಕಂಡರೆ ನಾಯಿಗಾಗುವುದಿಲ್ಲ. ಕಚ್ಚಾಡುವುದೋ, ಓಡಿಸಿಕ"ಂಡು ಹೋಗುವುದೋ ಅಥವಾ ಯಬೇರೆ ಯಾವ ರೀತಿಯಾದ್ರೂ ಜಗಳವಾಡುತ್ತಿರುತ್ತದೆ. ಆದರೆ ಇಲ್ಲಿ 1 ಕಡೆ ನಾಯಿ ಬೆಕ್ಕಿಗೆ ತನ್ನ ಹಾಲು ಕುಡಿಸಿ, ಮಾತೃ ವಾತ್ಸವ್ಯ ಮೆರೆದಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದ ಚೇತನ್ ಎಂಬುವರ ಮನೆಯಲ್ಲಿ ಸಾಕಿರುವ ಡೈಸಿ ಹೆಸರಿನ ನಾಯಿಯ ಬೆಕ್ಕಿನ ಮರಿಗೆ ಮೊಲೆಹಾಲುಣಿಸುವ ಮೂಲಕ ಬೆಕ್ಕಿಗೆ ಮಾತೃ ವಾತ್ಸಲ್ಯ ತೋರಿದೆ.ಈ ಶ್ವಾನದ ಮಾತೃ ವೈಶ್ಯಾಲ್ಯತೆ ಮಾದರಿ ಎನಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV