Dailyhunt
Mandya: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಂಡ್ಯ ಎಸ್ಪಿಗೆ ದೂರು ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು

Mandya: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಂಡ್ಯ ಎಸ್ಪಿಗೆ ದೂರು ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು

Karnataka TV 6 days ago

Mandya News: ಆರ್‌ಎಸ್‌ಎಸ್‌ ಅನ್ನು ವಿಷಕಾರಿ ಹಾವು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು, ಮಂಡ್ಯದಲ್ಲಿ ಖರ್ಗೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಎಸ್.ಪಿ ಗೆ ಈ ಬಗ್ಗೆ ದೂರು ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು, ಕಚೇರಿ ಬಳಿ ಖರ್ಗೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವನ್ನು ಹತ್ಯೆ ಮಾಡದಿದ್ದರೆ ನೀವು ಬದುಕುವುದಿಲ್ಲ ಎನ್ನುವ ಮೂಲಕ ಮುಸ್ಲಿಂಮರನ್ನು ಪ್ರಚೋದಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ತಕ್ಷಣವೇ ದ್ವೇಷ ಭಾಷಣ ಪ್ರಕಾರ ಕ್ರಮ ಕೈಗೊಳ್ಳಬೇಕು.
ಖರ್ಗೆ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಬಿಜೆಪಿ ಮುಖಂಡ ಸಿಟಿ ಮಂಜುನಾಥ್, ಪ್ರಸನ್ನ, ಹೊಸಹಳ್ಳಿ ಶಿವು, ಶಿವಕುಮಾರ್ ಆರಾಧ್ಯ, ನಿತ್ಯಾನಂದ, ಮಾದರಾಜಾರಸು, ಕೃಷ್ಣ,ಚಂದ್ರು, ಮಹಾಂತಪ್ಪ ,ಶಶಿಕುಮಾರ್, ಮಹೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಖರ್ಗೆ ಹೇಳಿದ್ದೇನು..?

ನೀವು ನಮಾಜ್ ಮಾಡುವ ವೇಳೆ ನಿಮ್ಮ ಎದುರು ವಿಷಕಾರಿ ಸರ್ಪ ಬಂದರೆ, ನೀವು ನಮಾಜ್ ನಿಲ್ಲಿಸಿ, ಆ ವಿಷಕಾರಿ ಸರ್ಪವನ್ನು ಹತ್ಯೆ ಮಾಡಬೇಕು ಎಂದು ಕುರಾನ್‌ನಲ್ಲಿ ಬರೆದಿದೆ. ಅದೇ ರೀತಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕೂಡ ವಿಷಕಾರಿ ಸರ್ಪವಿದ್ದಂತೆ. ನೀವು ನಮಾಜ್ ನಿಲ್ಲಿಸಿಯಾದ್ರೂ ಸರಿ, ಈ ವಿಷಸರ್ಪವನ್ನು ಮುಗಿಸಲೇಬೇಕಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Karnataka TV