Dailyhunt
Mandya News: ವಿಜೃಂಭಣೆಯಿಂದ ಜರುಗಿದ ಮೇಲುಕೋಟೆ ಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ

Mandya News: ವಿಜೃಂಭಣೆಯಿಂದ ಜರುಗಿದ ಮೇಲುಕೋಟೆ ಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ

Karnataka TV 1 week ago

Mandya: ಮಂಡ್ಯದ ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ತೆಪ್ಪೋತ್ಸವ ಜರುಗಿದೆ.

ಮೇಲುಕೋಟೆಯಲ್ಲಿ ಸದ್ಯ ವೈರಮುಡಿ ಬ್ರಹ್ಮೋತ್ಸವ ನಡೆಯುತ್ತಿದ್ದು, ಪಂಚ ಕಲ್ಯಾಣಿ ಕೊಳದಲ್ಲಿ ವೈಭವದಿಂದ ತೆಪ್ಪೋತ್ಸವ ನಡೆದಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ತೆಪ್ಪೋತ್ಸವಕ್ಕೆ ಚಾಲನೆ ನೀಡಿ, ಪೂಜೆ ಸಲ್ಲಿಸಿದ್ದು, ವೈರಮುಡಿ ಉತ್ಸವದಲ್ಲಿ ಭಾಗಿಯಾಗಿದ್ದಾರೆ.

ವೈಷ್ಣವ ಸಂಪ್ರದ್ರಾಯಂತೆ ಅಲಂಕೃತ ತೆಪ್ಪದಲ್ಲಿ ಚಲುವನಾರಾಯಣಸ್ವಾಮಿ ಮೂರ್ತಿ ಕೂರಿಸಿ ಅದ್ದೂರಿ ತೆಪ್ಪೋತ್ಸವ ನಡೆದಿದ್ದು, ದೇವಸ್ಥಾನಕ್ಕಾಗಮಿಸಿದ ಸಾವಿರಾರು ಭಕ್ತರು, ತೆಪ್ಪೋತ್ಸವವನ್ನು ಕಣ್ತುಂಬಿಕ"ಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV