Dailyhunt
Meerut: ವಿಚ್ಛೇದನ ಪಡೆದು ಬಂದ ಮಗಳನ್ನು ಭರ್ಜರಿಯಾಗಿ ಸ್ವಾಗತಿಸಿದ ನಿವೃತ್ತ ನ್ಯಾಯಾಧೀಶ

Meerut: ವಿಚ್ಛೇದನ ಪಡೆದು ಬಂದ ಮಗಳನ್ನು ಭರ್ಜರಿಯಾಗಿ ಸ್ವಾಗತಿಸಿದ ನಿವೃತ್ತ ನ್ಯಾಯಾಧೀಶ

Karnataka TV 1 day ago

Meerut: ವಿಚ್ಛೇದನ ಅಂದ್ರೆ ಮರ್ಯಾದೆ ಹೋಗೋ ವಿಷಯ ಅಂತಾ ಹಲವರು ತಿಳಿದಿದ್ದಾರೆ. ಹೌದು.. ವಿಚ್ಛೇದನವಾದಾಗ ಹಲವರು ಹಲವು ರೀತಿ ಮಾತನಾಡುತ್ತಾರೆ. ವಿಚ್ಛೇದನ ಪಡೆದವರ ಪೋಷಕರಿಗೆ ಅವಮಾನವಾಗುವ ರೀತಿ ನಡೆದುಕ"ಳ್ಳುತ್ತಾರೆ. ಆದರೆ ಮಾನಸಿಕ ನೆಮ್ಮದಿ ಇರದೆ, ಪ್ರೀತಿ-ಕಾಳಜಿ ಯಾವುದೂ ಇಲ್ಲದ ಸಂಬಂಧದಲ್ಲಿ ಇದ್ದು, ಮುಂದೆ 1 ದಿನ ಆತ್ಮಹತ್ಯೆಯ ದಾರಿ ಹಿಡಿಯುವುದಕ್ಕಿಂತ ವಿಚ್ಛೇದನ ಪಡೆದು ನೆಮ್ಮದಿಯಾಗಿರುವುದೇ ಉತ್ತಮವಲ್ಲವೇ..?

ಅಂಥ ಯೋಚನೆಯ ನಿವೃತ್ತ ನ್ಯಾಯಾಧಿಶರೋರ್ವರು, ತಮ್ಮ ವಿಚ್ಛೇದಿತ ಮಗಳನ್ನು ಬ್ಯಾಂಡ್ ಬಾಜಾದ ಜತೆ ವೆಲ್ಕಮ್ ಮಾಡಿದ್ದಾರೆ. ಉತ್ತರಪ್ರದೇಶದ ಮೀರತ್‌ನಲ್ಲಿ ಈ ಘಟನೆ ನಡೆದಿದ್ದು, ತಂದೆ-ತಾಯಿ ಐ ಲವ್ ಮೈ ಡಾಟರ್ ಎಂದು ಬರೆದ ಟೀ ಶರ್ಟ್ ಧರಿಸಿದ್ದರು. ಪುತ್ರಿ ಕೂಡ ಮೈ ಲೈಫ್ ಎಂದು ಬರೆದ ಟೀ ಶರ್ಟ್ ಧರಿಸಿದ್ದರು.

ಪ್ರಣೀತಾ ಡಿಸೆಂಬರ್ 2018ರಲ್ಲಿ ಸೇನಾ ಮೇಜರ್ ಗೌರವ್ ಅಗ್ನಿಹೋತ್ರಿ ಎಂಬುವವರನ್ನು ವಿವಾಹವಾಗಿದ್ದರು. ಆದರೆ ಅವರಿಗೆ ಮನೆಯಲ್ಲಿ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದರೆಂದು ಆರೋಪಿಸಿದ್ದಾರೆ. ಅಲ್ಲದೇ ಇವರಿಗೆ ಓರ್ವ ಮಗ ಇದ್ದು, ಅವನು ಜನಿಸಿದ ಬಳಿಕವೂ ಆ ಮಾನಸಿಕ ಮತ್ತು ದೈಹಿಕ ಹಿಂಸೆ ಮುಂದುವರೆಯಿತು ಎಂದು ಆರೋಪಿಸಲಾಗಿದೆ. ಹಾಗಾಗಿ ಪ್ರಣೀತಾ ವಿಚ್ಛೇದನದ ನಿರ್ಧಾರ ಮಾಡಿದ್ದು, ಇದಕ್ಕೆ ತವರು ಮನೆಯವರೂ ಬೆಂಬಲಿಸಿದ್ದಾರೆನ್ನಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV