Dailyhunt Logo
  • Light mode
    Follow system
    Dark mode
    • Play Story
    • App Story
ಮೋನಾಲೀಸಾ ಮದುವೆ ಕೇಸ್: ಪತ್ನಿ ಪ್ರಬುದ್ಧೆ ಎಂದು ಪತಿಗೆ ಟ್ರಾನ್ಸಿಟ್ ಬೇಲ್ ಮಂಜೂರು ಮಾಡಿದ ಕೋರ್ಟ್

ಮೋನಾಲೀಸಾ ಮದುವೆ ಕೇಸ್: ಪತ್ನಿ ಪ್ರಬುದ್ಧೆ ಎಂದು ಪತಿಗೆ ಟ್ರಾನ್ಸಿಟ್ ಬೇಲ್ ಮಂಜೂರು ಮಾಡಿದ ಕೋರ್ಟ್

Karnataka TV 1 day ago

Kerala News: ಮಹಾಕುಂಭ ಮೇಳದ ಸಂದರ್ಭದಲ್ಲಿ ರುದ್ರಾಕ್ಷಿ ಮಾಲೆ ಮಾರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಬಳಿಕ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದ ಮೋನಾಲೀಸಾ, ಇದೀಗ ತನ್ನ ಮದುವೆಯಿಂದಾಗಿ ಸುದ್ದಿಯಲ್ಲಿದ್ದಾಳೆ.

ಮನೆಯವರ ವಿರುದ್ಧ ಹೋಗಿ ಮೋನಾಲೀಸಾ ಫರ್ಮಾನ್ ಎಂಬ ಸಹನಟನನ್ನು ಕೇರಳದ ದೇವಸ್ಥಾನದಲ್ಲಿ ವರಿಸಿದ್ದಳು.

ಈ ವೇಳೆ ಅಲ್ಲಿನ ಪೋಲೀಸರ ಬಳಿ ತನ್ನ ತಂದೆ ತಾಯಿಯ ವಿರುದ್ಧವೇ ದೂರು ನೀಡಿ, ಅವರಿಂದ ನಮ್ಮನ್ನು ರಕ್ಷಿಸಿ ಎಂದು ಮೋನಾಲೀಸಾ ಕೇಳಿದ್ದಳು.

ಬಳಿಕ ಮೋನಾಲೀಸಾ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿತ್ತು. ಇಂಥವರನ್ನೆಲ್ಲಾ ನಾವು ಫೇಮಸ್ ಮಾಡಿ ತಪ್ಪು ಮಾಡಿದ್ವಿ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದರು. ನಂತರ ಪ್ರೆಸ್‌ಮೀಟ್ ನಡೆಸಿ, ನಮಗೆ ಹತ್ಯೆ ಬೆದರಿಕೆ ಬರುತ್ತಿದೆ ನಮ್ಮನ್ನು ರಕ್ಷಿಸಬೇಕು ಎಂದು ಸರ್ಕಾರದ ಬಳಿ ಮೋನಾಲೀಸಾ ಮತ್ತು ಫರ್ಮಾನ್ ಮನವಿ ಮಾಡಿದ್ದರು.

ಅಲ್ಲದೇ 1 ಹೆಜ್ಜೆ ಮುಂದೆ ಹೋಗಿದ್ದ ಮೋನಾಲೀಸಾ ರಾಧಾ ಕೃಷ್ಣನನ್ನು ವರಿಸುವಾಗ, ನೀನು ಮುಸ್ಲಿಂಮಾ ಹಿಂದೂನಾ ಅಂತಾ ಕೇಳಿದ್ದಳಾ ಅಂತಾ ಪ್ರಶ್ನಿಸಿ, ತನ್ನ ಪ್ರೀತಿಯನ್ನು ರಾಧಾ-ಕೃಷ್ಣರ ಪವಿತ್ರ ಪ್ರೀತಿಗೆ ಹೋಲಿಕೆ ಮಾಡಿ, ನೆಟ್ಟಿಗರಿಂದ ಟ್ರೋಲ್‌ಗೂ ಗುರಿಯಾಗಿದ್ದಳು.

ಅದಾದ ಬಳಿಕ ಮೋನಾಲೀಸಾ ವಯಸ್ಸಿನಲ್ಲಿ ಚಿಕ್ಕವಳು. ಆಕೆಗೆ ಇನ್ನೂ 16 ವರ್ಷ ಎಂದು ಫರ್ಮಾನ್ ವಿರುದ್ಧ ದೂರು ನೀಡಲಾಗಿತ್ತು. ಬಳಿಕ ಕೋರ್ಟ್ ಫರ್ಮಾನ್ನನ್ನು ವಿಚಾರಣೆಗೆ ಕರೆದಾಗ, ನನ್ನ ಪತ್ನಿ ಮೋನಾಲೀಸಾ ಗರ್ಭಿಣಿ. ಹಾಗಾಗಿ ಆಕೆ ಪ್ರಯಾಣಿಸುವಂತಿಲ್ಲ. ಆಕೆ ವಿಚಾರಣೆಗೆ ಬರುಲಾಗುವುದಿಲ್ಲ ಎಂದು ಫರ್ಮಾನ್ ಹೇಳಿ, ಜೈಲು ಪಾಲಾಗುವುದರಿಂದ ತಪ್ಪಿಸಿಕ"ಂಡಿದ್ದ.

ಬಳಿಕ ಬೇಲ್ ಕೋರಿ ಅರ್ಜಿಯೂ ಸಲ್ಲಿಸಿದ್ದ. ಇದೀಗ ಕೇರಳ ಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸಿ, ಮೋನಾಲೀಸಾ ಪ್ರಬುದ್ಧೆ ಎಂದು ತೀರ್ಪು ನೀಡಿ. ಫರ್ಮಾನ್‌ಗೆ ಟ್ರಾನ್ಸಿಟ್ ಬೇಲ್ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV