Dailyhunt Logo
  • Light mode
    Follow system
    Dark mode
    • Play Story
    • App Story
Movie News: ಕೊಲವೆರಿಡಿ ಮ್ಯೂಸಿಕ್ ಡೈರೆಕ್ಟರ್ ಜೊತೆ ಕಾವ್ಯಾ ಮಾರನ್ ಮ್ಯಾರೇಜ್..?

Movie News: ಕೊಲವೆರಿಡಿ ಮ್ಯೂಸಿಕ್ ಡೈರೆಕ್ಟರ್ ಜೊತೆ ಕಾವ್ಯಾ ಮಾರನ್ ಮ್ಯಾರೇಜ್..?

Karnataka TV 3 days ago

Movie News: ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಪುತ್ರಿ ಮತ್ತು ಐಪಿಎಲ್‌ನ ಸನ್‌ ರೈಸಸ್ ಹೈದರಾಬಾದ್ ಮುಖ್ಯಸ್ಥೆ ಕಾವ್ಯಾ ಮಾರನ್ ಈ ವರ್ಷಾಂತ್ಯದಲ್ಲಿ ಹಸೆಮಣೆ ಏರಲಿದ್ದಾರೆ. ಕೊಲವೆರಿ ಡಿ ಹಾಡಿನ ಖ್ಯಾತಿಯ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ ರವಿಚಂದರ್ ಜೊತೆ ಕಾವ್ಯಾ ವಿವಾಹವಾಗಲಿದ್ದಾರೆ.

ತಮಿಳು ಸಂಗೀತ ನಿರ್ದೇಶಕರಾಗಿರುವ ಅನಿರುದ್ಧ ಮತ್ತು ಕಾವ್ಯಾ 1 ವರ್ಷದಿಂದ ಪ್ರೀತಿ ಮಾಡುತ್ತಿದ್ದರು ಅನ್ನೋ ಗಾಸಿಪ್ ಹರಿದಾಡಿತ್ತು. ಇದೀಗ ಆ ಗಾಸಿಪ್ ನಿಜವಾಗಿದ್ದು, ಇದೇ ವರ್ಷದ ಡಿಸೆಂಬರ್ ವೇಳೆಗೆ ಇಬ್ಬರೂ ಹಸೆಮಣೆ ಏರಲಿದ್ದಾರೆಂಬ ಸುದ್ದಿ ಇದೆ. ಆದರೆ ಅನಿರುದ್ಧ ಮಾತ್ರ, ಇದೆಲ್ಲಾ ಗಾಳಿ ಸುದ್ದಿ ನಾನು ಇಷ್ಟು ಬೇಗ ವಿವಾಹವಾಗುವುದಿಲ್ಲ ಎಂದಿದ್ದಾರೆ.

ಸೆಲೆಬ್ರಿಟಿಗಳ ವಿಷಯದಲ್ಲಿ ಸ್ಪಷ್ಟತೆ ಇಲ್ಲದಿದ್ದರೂ, ಹರಡೋ ಗಾಸಿಪ್ ಸುಳ್ಳು ಅಂತಾ ಹೇಳೋಕ್ಕೂ ಆಗಲ್ಲ. ಕೆಲ ವರ್ಷಗಳ ಹಿಂದೆ ವಿಜಯ್ ಮತ್ತು ರಶ್ಮಿಕಾ ಮದುವೆ ಆಗ್ತಾರಂತೆ ಅನ್ನೋ ಸುದ್ದಿ ಹರಿದಾಡಿತ್ತು. ಇದೀಗ ಸತ್ಯಕ್ಕೂ ವಿಜಯ್-ರಶ್ಮಿಕಾ ಗಂಡ ಹೆಂಡ್ತಿ ಆಗಿಯಾಗಿದೆ. ಅದೇ ರೀತಿ ಕಾವ್ಯಾ-ಅನಿರುದ್ಧ ಗಾಸಿಪ್ ಕೂಡ ಸತ್ಯವಾಗಬಹುದು. ಅಥವಾ ಗಾಸಿಪ್ ಆಗಿಯೇ ಉಳಿಯಲೂಬಹುದು.

Dailyhunt
Disclaimer: This content has not been generated, created or edited by Dailyhunt. Publisher: Karnataka TV