Dailyhunt Logo
  • Light mode
    Follow system
    Dark mode
    • Play Story
    • App Story
ನಾಗೇಂದ್ರಗೆ ಚಾರ್ಜ್‌ಶೀಟ್‌ ಸಂಕಷ್ಟ - ಸ್ಪೋಟಕ ರಹಸ್ಯ ಬಯಲು!

ನಾಗೇಂದ್ರಗೆ ಚಾರ್ಜ್‌ಶೀಟ್‌ ಸಂಕಷ್ಟ - ಸ್ಪೋಟಕ ರಹಸ್ಯ ಬಯಲು!

Karnataka TV 4 days ago

ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದ 'ವಾಲ್ಮೀಕಿ ನಿಗಮ ಹಗರಣ'ಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ಸುತ್ತ ಕಾನೂನಿನ ಉರುಳು ಮತ್ತಷ್ಟು ಬಿಗಿಯಾಗಿದೆ! ಹೌದು, ಸಿಐಡಿ, ಇ.ಡಿ ಬೆನ್ನಲ್ಲೇ ಈಗ ಸಿಬಿಐ ಕೂಡ ತನ್ನ ತನಿಖೆಯನ್ನು ಪೂರ್ಣಗೊಳಿಸಿ ಬಿಗ್ ಬಾಂಬ್ ಸಿಡಿಸಿದೆ.

ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಒಂದಕ್ಕಿಂತ ಒಂದು ಬೆಚ್ಚಿಬೀಳಿಸುವ ರಹಸ್ಯಗಳು ಹೊರಬಿದ್ದಿವೆ..

ಅಷ್ಟಕ್ಕೂ ಆ ಚಾರ್ಜ್‌ಶೀಟ್‌ನಲ್ಲಿ ಏನಿದೆ ಗೊತ್ತಾ? ಅಸಲಿಗೆ ಅದರ ಮೊತ್ತ ನೋಡೋದಾದ್ರೆ, ಬರೋಬ್ಬರಿ 89 ಕೋಟಿ, 63 ಲಕ್ಷ ರೂಪಾಯಿ ಸಾರ್ವಜನಿಕರ ಹಣವನ್ನು ನಕಲಿ ಚೆಕ್‌ಗಳು ಮತ್ತು ಆರ್‌ಟಿಜಿಎಸ್ ಮೂಲಕ ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಲಾಗಿದೆ!

600ಕ್ಕೂ ಹೆಚ್ಚು ಖಾತೆಗಳು: ತನಿಖಾಧಿಕಾರಿಗಳ ಕಣ್ಣಿಗೆ ಮಣ್ಣೆರಚಲು, ಹೈದರಾಬಾದ್ ಸೇರಿದಂತೆ ಬೇರೆ ಬೇರೆ ಕಡೆ ಬರೋಬ್ಬರಿ 600ಕ್ಕೂ ಹೆಚ್ಚು ನಕಲಿ ಹಾಗೂ ಬೇನಾಮಿ ಖಾತೆಗಳ ಮೂಲಕ ಈ ಹಣವನ್ನು ಹಂಚಲಾಗಿದೆ.

ಇನ್ನು ಅತಿ ಮುಖ್ಯವಾಗಿ, ಈ ಲೂಟಿ ಮಾಡಿದ ಹಣದಲ್ಲಿ ಬಹುಪಾಲು ಮೊತ್ತವನ್ನು ಬಳ್ಳಾರಿ ಲೋಕಸಭಾ ಚುನಾವಣೆಯ ಖರ್ಚಿಗೆ ಹಾಗೂ ಮತದಾರರಿಗೆ ಹಂಚಲು ಬಳಸಲಾಗಿದೆ ಅಂತ ಸಿಬಿಐ ಸ್ಪಷ್ಟವಾಗಿ ಉಲ್ಲೇಖಿಸಿದೆ! ಅಷ್ಟೇ ಅಲ್ಲ, ಈ ಕದ್ದ ಹಣದಿಂದ ಐಷಾರಾಮಿ ಕಾರುಗಳು, ಭಾರೀ ಪ್ರಮಾಣದ ಬೆಳ್ಳಿ ಆಭರಣಗಳು ಹಾಗೂ ಆಸ್ತಿಗಳನ್ನು ಕೂಡ ಖರೀದಿಸಲಾಗಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಈ ಪ್ರಕರಣದಲ್ಲಿ ಒಟ್ಟು 13 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿದ್ದು, ಇದರಲ್ಲಿ ಬಿ. ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್, ಸತ್ಯನಾರಾಯಣ ವರ್ಮಾ, ನಿಗಮದ ಅಧಿಕಾರಿಗಳು ಹಾಗೂ ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳು ಕೂಡ ಸೇರಿದ್ದಾರೆ.

ಸದ್ಯ ಸಿಬಿಐ ಈಗಾಗಲೇ ಮೂರು ಚಾರ್ಜ್‌ಶೀಟ್‌ಗಳನ್ನು ಸಲ್ಲಿಕೆ ಮಾಡಿದೆ. ಆದರೆ ಹಾಲಿ ಜನಪ್ರತಿನಿಧಿಯಾಗಿರೋದ್ರಿಂದ, ಬಿ. ನಾಗೇಂದ್ರ ಅವರ ವಿರುದ್ಧ ಅಧಿಕೃತವಾಗಿ ವಿಚಾರಣೆ ಆರಂಭಿಸಲು ರಾಜ್ಯಪಾಲರ ಅನುಮತಿ ಕಡ್ಡಾಯ. ಇದಕ್ಕಾಗಿ ಸಿಬಿಐ ಈಗಾಗಲೇ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದು ಗ್ರೀನ್ ಸಿಗ್ನಲ್ ಕೇಳಿದೆ ಅಂತ ಹೇಳಲಾಗ್ತಿದೆ!

ಎಸ್ 'ಒಮ್ಮೆ ರಾಜ್ಯಪಾಲರು ಈ ಪ್ರಾಸಿಕ್ಯೂಷನ್ ಅನುಮತಿಗೆ ಒಪ್ಪಿಗೆ ಕೊಟ್ಟರೆ, ಬಿ. ನಾಗೇಂದ್ರ ಅವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಏಟು ಬೀಳೋದು ಖಂಡಿತ. ಮುಂದಿನ ದಿನಗಳಲ್ಲಿ ಕೋರ್ಟ್‌ನಲ್ಲಿ ಈ ಕೇಸ್ ಯಾವ ಹಂತ ತೆಗೆದುಕೊಳ್ಳುತ್ತೆ ಅನ್ನೋದನ್ನು ಕಾದು ನೋಡಬೇಕು! ಹಾಗೆ ಈ ಹಗರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ ತಿಳಿಸಿ..ಹಾಗೆ ನಮ್ಮ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡೋದನ್ನು ಮರೆಯಬೇಡಿ..

Dailyhunt
Disclaimer: This content has not been generated, created or edited by Dailyhunt. Publisher: Karnataka TV