Dailyhunt Logo
  • Light mode
    Follow system
    Dark mode
    • Play Story
    • App Story
Political News: ಹಿರಿಯರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ನೀಡಬಹುದಿತ್ತು: ಛಲವಾದಿ ನಾರಾಯಣಸ್ವಾಮಿ

Political News: ಹಿರಿಯರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ನೀಡಬಹುದಿತ್ತು: ಛಲವಾದಿ ನಾರಾಯಣಸ್ವಾಮಿ

Karnataka TV 2 weeks ago

Political News: ಬಿದರ್‌ನಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿರುವ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ, ಖರ್ಗೆಗೆ ಅಥವಾ ಜಿ.ಪರಮೇಶ್ವರ್‌ಗೆ ಸಿಎಂ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಸಿದ್ದರಾಮಯ್ಯ ಅಭಿಮಾನಿಗಳಿಗೆ ಈ ಬಗ್ಗೆ ಅಸಮಾಧಾನವಾಗೋದು, ಆಕ್ರೋಶ ಬರುವುದು ಸಹಜ.

8 ವರ್ಷಗಳ ಕಾಲ ಅವರು ರಾಜ್ಯವನ್ನು ಆಳಿದ್ದಾರೆ. ಅವರನ್ನು ಹೈಕಮಾಂಡ್ ಗೌರವದಿಂದ ನಡೆಸಿಕ"ಳ್ಳಬೇಕಿತ್ತು. ಆದರೆ ನಿನ್ನೆ ಹೋದಾಗ, ಅವರನ್ನು ಹಾರ್ಶ್ ಆಗಿ ಮಾತನಾಡಿಸಿದ್ದು, ಇಂದೇ ರಾಜೀನಾಮೆ ಸಲ್ಲಿಸಿ ಎಂದು ರಾಹುಲ್ ಗಾಂಧಿ ತಾಕೀತು ಮಾಡಿದ್ದರು ಅನ್ನೋ ವಿಷಯ ಇದೆ.

ಅದಕ್ಕೆ ಸಿಎಂ ಸಿದ್ದರಾಮಯ್ಯನವರು ಬೇರೆ ಮಾತನಾಡದೇ, ರಾಜೀನಾಮೆ ನೀಡಲು ಓಕೆ ಎಂದು ವಾಪಸ್ ಬಂದಿದ್ದಾರೆಂದು ಹೇಳಲಾಗಿದೆ. ಹಾಗೆ ಮಾಡಬಾರದಿತ್ತು. ಹಿರಿತನಕ್ಕೆ ಬೆಲೆ ನೀಡಬೇಕಿತ್ತು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಅಲ್ಲದೇ, ಹೈಕಮಾಂಡ್ ಎಂದರೆ ಗಾಂಧಿ ಫ್ಯಾಮಿಲಿಯವರು ಮಾತ್ರಾನಾ..? ರಾಹುಲ್ ಗಾಂಧಿಯವರೇ ಹೈಕಮಾಂಡಾ..? ಮಲ್ಲಿಕಾರ್ಜುನ ಖರ್ಗೆ ಸಾಹೇಬ್ರು ಅಧ್ಯಕ್ಷರಲ್ಲವಾ..? ಅವರಿಗೂ ಹೈಕಮಾಂಡ್‌ಗೂ ಸಂಬಂಧ ಇಲ್ವಾ..? ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ಸಾಹೇಬ್ರೇ ಸಿಎಂ ಆಗಬೇಕಿತ್ತು. ಯಾಾಕಂದ್ರೆ ಆ ಎತ್ತರಕ್ಕೆ ಬೆಳೆದ ದಲಿತರು ಇನ್ಯಾರಿದ್ದಾರೆ..? ಎಐಸಿಸಿ ಅಧ್ಯಕ್ಷರು ಅವರು. ಆದರೆ ಕಾಂಗ್ರೆಸ್ ಪಕ್ಷ 80 ವರ್ಷಗಳಿಂದ ದಲಿತರಿಗೆ ವಂಚಿಸುತ್ತಿದೆ. ಈ ಸಾರಿಯಾದರೂ ದಲಿತರು ಸಿಎಂ ಆಗ್ತಾರೆ ಅಂತಾ ತಿಳಿದಿದ್ವಿ. ಆದರೆ ಈಗಲೂ ಕಾಂಗ್ರೆಸ್ ಆ ನಿರ್ಧಾರಕ್ಕೆ ಬಂದಿಲ್ಲ. ಹೀಗಾದರೆ, ಈಗಾಗಲೇ ದೇಶದಲ್ಲೇ ಹೋಗಿರುವ ಕಾಂಗ್ರೆಸ್ ರಾಜ್ಯದಲ್ಲೂ ಇನ್ನು ಮುಂದೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಛಲವಾದಿ ಭವಿಷ್ಯ ನುಡಿದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV