Dailyhunt Logo
  • Light mode
    Follow system
    Dark mode
    • Play Story
    • App Story
Political News: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರ: ಸಚಿವ ಸಂತೋಷ್ ಲಾಡ್ ಕಣ್ಣೀರು

Political News: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರ: ಸಚಿವ ಸಂತೋಷ್ ಲಾಡ್ ಕಣ್ಣೀರು

Karnataka TV 1 week ago

Political News: ಇಂದು ಉಪಹಾರ ಕೂಟದಲ್ಲಿ ಸಿಎಂ ಸಿದ್ದರಾಮಯ್ಯ ತಾನು ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ಸಿಎಂ ಯಾರಾಗ್ತಾರೆ ಅನ್ನೋದು ಹೈಕಮಾಂಡ್ ಹೇಳತ್ತೆ ಎಂದು ಹೇಳಿರುವ ಅವರು, ಮುಂದಿನ ಸಿಎಂ ಯಾರು ಅನ್ನೋ ಕುತೂಹಲ ಹಾಗೆ ಇರುವಂತೆ ಮಾಡಿದ್ದಾರೆ.

ಆದರೆ ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಕ್ಕೆ, ಸಚಿವ ಸಂತೋಷ್ ಲಾಡ್ ಕಣ್ಣೀರು ಹಾಕಿದ್ದಾರೆ. ಉಪಹಾರ ಕೂಟದ ಬಳಿಕ ಸಂತೋಷ್ ಲಾಡ್ ಸಿಎಂ ರಾಜೀನಾಮೆ ನೀಡುತ್ತೇನೆ ಎಂದಿದ್ದಕ್ಕೆ ಬೇಸರವಾಗಿ, ಕಣ್ಣೀರಿಡುತ್ತ ಆಚೆ ನಡೆದರು.

ಮಾಧ್ಯಮದವರು ಮಾತಾಡಿ ಸರ್ ಎಂದು ಕೇಳಿದಾಗ, ಕಣ್ಣೀರು ತಡೆಯಲಾಗದೇ ಸಂತೋಷ್ ಲಾಡ್ ಮತ್ತೂ ಭಾವುಕರಾಗಿದ್ದಾರೆ. ಬಳಿಕ ಉತ್ತರಿಸಿದ ಸಂತೋಷ್ ಸಿದ್ದರಾಮಯ್ಯ ಸಾಹೇಬ್ರು ಮಧ್ಯಾಹ್ನ 3 ಗಂಟೆಗೆ ರಾಜೀನಾಮೆ ನೀಡಲಿದ್ದಾರೆಂದು ಹೇಳಿದ್ದಾರೆ.

1 ಲೆಕ್ಕದಲ್ಲಿ ಸಂತೋಷ್ ಲಾಡ್ ಸಚಿವರಾಗಲು ಸಿಎಂ ಸಿದ್ದರಾಮಯ್ಯ ಅವರೇ ಕಾರಣವಾಗಿದ್ದರು. ಸಂತೋಷ್ ಲಾಡ್ ಅವರು ಕೆಲ ವರ್ಷಗಳ ಹಿಂದೆ ಕಾಂಗ್ರೆಸ್‌ನಿಂದ ಉಚ್ಛಾಟಿತರಾಗಿದ್ದರು. ಹಾಗಾಗಿ ಅವರನ್ನು ಈ ಬಾರಿ ಸಚಿವರನ್ನಾಗಿ ಮಾಡಬಾರದು ಅನ್ನೋ ಆಗ್ರಹವಿತ್ತು. ಹಲವರಿಗೆ ಸಂತೋಷ್ ಸಚಿವರಾಗಲು ವಿರೋಧವಿತ್ತು.

ಆದರೆ ಸಿದ್ದರಾಮಯ್ಯನವರು ಯಾರ ಮಾತನ್ನು ಕೇಳದೇ, ಸಂತೋಷ್ ಲಾಡ್ ಅವರ ಮೇಲೆ ನಂಬಿಕೆ ಇಟ್ಟು, ಸಂತೋಷ್ ಅವರಿಗೆ ಸಚಿವ ಸ್ಥಾನ ನೀಡಿದ್ದರು. ಅದೇ ರೀತಿ ಸಂತೋಷ್ ಕೂಡ ತಮಗೆ ನೀಡಿದ ಜವಾಬ್ದಾರಿ ನಿಭಾಯಿಸಿದ್ದರು.

ಹಾಗಾಗಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ನಿರ್ಧಾರ ಮಾಡಿದಾಗ, ಸಂತೋಷ್ ಲಾಡ್ ಕಣ್ಣೀರು ಹಾಕುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV