Sandalwood News: ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಪಂಜಾಬ್‌ನ ಸ್ವರ್ಣಮಂದಿರದಲ್ಲಿ ಭಕ್ತರು ಪ್ರಸಾದ ಸೇವಿಸಿದ ಪ್ಲೇಟ್-ಲೋಟ ವಾಶ್ ಮಾಡಿದ್ದರ ಬಗ್ಗೆ ಸುದ್ದಿಯಾಗುತ್ತಿದೆ. ಈ ವಿಷಯವನ್ನು ನಟ ಜಗ್ಗೇಶ್ ಪ್ರಸ್ತಾಪಿಸಿ, ಪ್ರಿಯಾಂಕಾ ಛೋಪ್ರಾ ಪಾತ್ರೆ ವಾಶ್ ಮಾಡಿದಾಗ ಭೇಷ್ ಎಂದವರು, ನಾನು ದೇವಸ್ಥಾನದಲ್ಲಿ ಕಸ ಗುಡಿಸಿದ್ದಕ್ಕಾಗಿ ಹೀಯಾಳಿಸಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದಿರುವ ಅವರು, ಪ್ರಿಯಾಂಕ ಚೋಪ್ರ ಶ್ರೀಮಂತೆ ನಟಿ, ಆದರು ಆಲಯದಲ್ಲಿ ತಟ್ಟೆತೊಳೆದಳು ಎಂದಾಗ ದೊಡ್ಡ ಸುದ್ಧಿ ಆಯಿತು..! ಜಗ್ಗೇಶ ರಾಯರ ಮಠದಲ್ಲಿ ಕಸಗುಡಿಸಿದ ಎಂದಾಗ ಜಾಲತಾಣದಲ್ಲಿ ಅಣಕವಾಯಿತು..!

