Monday, 10 Aug, 2.18 pm Karnataka TV

ಕರ್ನಾಟಕ ಟಿವಿ
ರೈತರ ಪ್ರತಿಭಟನೆ ಅವಕಾಶ ನೀಡದ ಖಾಕಿ. ಅಕ್ರಮ ಭೂಕಬಳಿಕೆಗೆ ಆಡಳಿತ ಸರ್ಕಾರವೇ ಸಾಥ್..?

ಹಾಲಿ ಸರ್ಕಾರದ ಪ್ರಭಾವಿ ರಾಜಕೀಯ ನಾಯಕನ ವಿರುದ್ಧ ಗೋಮಾಳ ಜಾಗ ಕಬಳಿಕೆ ಆರೋಪ ಕೇಳಿಬಂದಿದ್ದು, ರೈತ ಸಂಘಟನೆಗಳ ಬೃಹತ್ ಪ್ರತಿಭಟನೆ ವೇಳೆ ತಡೆದು ವಶಕ್ಕೆ ಪಡೆದ ಘಟನೆ ಯಲಹಂಕದ ಮಾವಳ್ಳಿಪುರ ಗ್ರಾಮದಲ್ಲಿ ನಡೆಯಿತು.

ಹೆಸರಘಟ್ಟ ಹೋಬಳಿಯ ಲಿಂಗರಾಜಪುರ ಗ್ರಾಮದ ಗೋಮಾಳ ಸರ್ವೇ ನಂಬರ್ 5ರಲ್ಲಿ 8 ಎಕರೆ ಮತ್ತು ಮೈಲಪ್ಪನಹಳ್ಳಿ ಗ್ರಾಮದ ಹುಲ್ಲುಗಾವಲು ಸರ್ವೆ ನಂಬರ್ 25ರಲ್ಲಿ 10 ಎಕರೆ ಜಮೀನುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಕ್ರಮ ಖಾತೆ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ರಾಜ್ಯ ಸಮಿತಿ) ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಕೋವಿಡ್-19 ಹಿನ್ನೆಲೆ ಪ್ರತಿಭಟನೆ ಕೈಬಿಡುವಂತೆ ರೈತರ ಮನವೊಲಿಸಲು ಪೊಲೀಸರು ಯತ್ನಿಸಿದರು. ಆದ್ರೆ ಪೊಲೀಸರ ಮನವಿಗೆ ಸ್ಪಂದಿಸದೆ, ಪ್ರತಿಭಟನೆಗೆ ಮುಂದಾದಾಗ 200ಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆದರು

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಮಂಜೇಗೌಡರು ಮಾತನಾಡಿ, ಸಿಎಂ ಯಡಿಯೂರಪ್ಪ ಅವರು ಪ್ರಮಾಣವಚನ ವೇಳೆ ಹಸಿರು ಶಾಲನ್ನು ಹೆಗಲ ಮೇಲೆ ಹಾಕಿಕೊಂಡು ನಮ್ಮದು ರೈತರ ಪಕ್ಷ ಎಂದಿದ್ದರು. ಆದ್ರೀಗ ಅದೇ ಸರ್ಕಾರ ರೈತರ ಪ್ರತಿಭಟನೆಗೆ ಅವಕಾಶ ನೀಡದೆ, ರೈತ ವಿರೋಧಿ ಸರ್ಕಾರವೆಂದು ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ರಾಜ್ಯ ಉಸ್ತುವಾರಿ ಹಾಗೂ ರಾಜ್ಯ ಸಂಚಾಲಕರು ಮಾತನಾಡಿ, ಲಿಂಗರಾಜಪುರ ಗ್ರಾಮಸ್ಥರಿಗೆ ತೊಂದರೆ ಆಗಿದ್ದು, ಪಾದಯಾತ್ರೆ ಮೂಲಕ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಇದೇ ವೇಳೆ ರೈತರನ್ನು ತಡೆಯಲಾಗಿದೆ. ಪೊಲೀಸರು ರೈತರನ್ನು ಕಳ್ಳರಂತೆ ನೋಡುತ್ತಿದ್ದು, ಇದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ್ರು.

ಕಾಂಗ್ರೆಸ್ ಮುಖಂಡರಾದ ಕೇಶವ ರಾಜಣ್ಣ ಮಾತನಾಡಿ, ಇಡೀ ಕರ್ನಾಟಕದಲ್ಲೇ ಯಲಹಂಕ ಕ್ಷೇತ್ರದಲ್ಲಿ ಭ್ರಷ್ಟಾಚಾರ ಹಾಗೂ ದೌರ್ಜನ್ಯ ಮಿತಿ ಮೀರಿದ್ದು, ಕಿಲೋಮೀಟರ್ ಗಟ್ಟಲೆ ಅಕ್ರಮವಾಗಿ ಭೂಕಬಳಿಕೆಯಾಗಿದೆ. ಅಮಾಯಕರ ಕಣ್ಣಿಗೆ ಮಣ್ಣೆರಚಿ, ಇನ್ನೆಷ್ಟು ಅಕ್ರಮ ಮಾಡಲು ಸಾಧ್ಯ, ಉಪ್ಪು ತಿಂದವರು ಇಂದಲ್ಲ ನಾಳೆ ನೀರು ಕುಡಿಯಲೇಬೇಕು ಎಂದು ಕಿಡಿಕಾರಿದರು.
ನಾಗೇಂದ್ರ, ಕರ್ನಾಟಕ ಟಿವಿ, ಬೆಂಗಳೂರು

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Karnataka TV
Top