Dailyhunt
Sandalwood: ಬಿಗ್‌ಬಾಸ್ ವಿನ್ನರ್‌ಗೆ ನಟ ಪ್ರಜ್ವಲ್ ದೇವರಾಜ್ ಕೊಟ್ಟರು ರೈಸಿಂಗ್ ಸ್ಟಾರ್ ಬಿರುದು

Sandalwood: ಬಿಗ್‌ಬಾಸ್ ವಿನ್ನರ್‌ಗೆ ನಟ ಪ್ರಜ್ವಲ್ ದೇವರಾಜ್ ಕೊಟ್ಟರು ರೈಸಿಂಗ್ ಸ್ಟಾರ್ ಬಿರುದು

Karnataka TV 2 weeks ago

Sandalwood: ಬಿಗ್‌ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಗೆ ನಟ ಪ್ರಜ್ವಲ್ ದೇವರಾಜ್ ರೈಸಿಂಗ್ ಸ್ಟಾರ್ ಅನ್ನೋ ಬಿರುದು ನೀಡಿದ್ದಾರೆ. ಇದರಿಂದ ಫುಲ್ ಖುಷ್ ಆಗಿರುವ ಕಾರ್ತಿಕ್, ಧನ್ಯವಾದ ಸಲ್ಲಿಸಿದ್ದಾರೆ.

ಈ ಹಿಂದೆ ರಿಯಾಲಿಟಿ ಶೋನಲ್ಲಿ ಪ್ರಜ್ವಲ್ ಜಡ್ಜ್ ಆಗಿದ್ದಾಗ, ಕಾರ್ತಿಕ್ ಮಹೇಶ್ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆಗಲೇ ಪ್ರಜ್ವಲ್, ನೀನು ಈ ಶೋ ಮುಗಿಸಿ ಆಚೆ ಹೋದಮೇಲೆ ಸ್ಟಾರ್ ಆಗ್ತೀಯಾ ಅಂತಾ ಭವಿಷ್ಯ ನುಡಿದಿದ್ದರಂತೆ. ಇದೀಗ ಆ ಮಾತಿನಂತೆ ಕಾರ್ತಿಕ್ ಮಹೇಶ್ ಸಿರಿಯಲ್ ಸಿನಿಮಾ, ಬಿಗ್‌ಬಾಸ್ ಹೀಗೆ ಹಲವು ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ.

ಇದೀಗ ರಾಮರಸ ಮೂವಿ ಈವೆಂಟ್‌ನಲ್ಲಿ ಮಹೇಶ್ ಕಾರ್ತಿಕ್‌ಗೆ ಪ್ರಜ್ವಲ್ ರೈಸಿಂಗ್ ಸ್ಟಾರ್ ಅನ್ನೋ ಬಿರುದು ನೀಡಿದ್ದಾರೆ. ಇನ್ನು ಬಿರುದು ಪಡೆದು ಫುಲ್ ಖುಷ್ ಆಗಿರುವ ಕಾರ್ತಿಕ್, ಪ್ರಜ್ವಲ್‌ಗೆ ಧನ್ಯವಾದ ಸಲ್ಲಿಸಿದ್ದಾರೆ. ಪ್ರಜ್ಜು ಅಣ್ಣ ರಿಯಾಲಿಟಿ ಶೋನಲ್ಲೂ ಕೂಡ ನನಗೆ ಎನಕರೇಜ್ ಮಾಡಿದ್ದರು. ಅವಕಾಶ ಸಿಕ್ಕರೆ ಮತ್ತೆ ಡಾನ್ಸ್ ಮಾಡುವೆ ಎಂದು ಕಾರ್ತಿಕ್ ಮಹೇಶ್ ಹೇಳಿದ್ದಾರೆ.

ಸದ್ಯ ರಾಮರಸ ಸಿನಿಮಾದಲ್ಲೂ ಕಾರ್ತಿಕ್ ಮಹೇಶ್ ನಟಿಸಿದ್ದು, ಈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ರಾಮರಸ ನನಗೆ ತುಂಬಾ ಸ್ಪೆಶಲ್ ಸಿನಿಮಾ. ಬಿಗ್‌ಬಾಸ್ ಬಳಿಕ ಜನರು ನೀಡಿದ ಜವಾಬ್ದಾರಿ ನಿಭಾಯಿಸಬೇಕು ಅಂದುಕ"ಂಡಿದ್ದೆ. ಅದೇ ಸಮಯದಲ್ಲಿ ನನಗೆ ರಾಮರಸದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ಈ ಸಿನಿಮಾದಲ್ಲಿ ಎಲ್ಲ ರೀತಿಯ ಪಾತ್ರ ನಿಭಾಯಿಸಿದ್ದೇನೆ. ಸಿನಿಮಾ ವೀಕ್ಷಿಸಿ, ಬೆಂಬಲಿಸಿ ಎಂದು ಕಾರ್ತಿಕ್ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV