Dailyhunt Logo
  • Light mode
    Follow system
    Dark mode
    • Play Story
    • App Story
Sandalwood: 'ಟಾಕ್ಸಿಕ್' ಇವೆಂಟ್‌ನಲ್ಲಿ ದುರಂತ! ಯಶ್ ಮುಂದೆನೇ ಬಿದ್ದ ಸೌಂಡ್‌ಬಾಕ್ಸ್!

Sandalwood: 'ಟಾಕ್ಸಿಕ್' ಇವೆಂಟ್‌ನಲ್ಲಿ ದುರಂತ! ಯಶ್ ಮುಂದೆನೇ ಬಿದ್ದ ಸೌಂಡ್‌ಬಾಕ್ಸ್!

Karnataka TV 13 hrs ago

Sandalwood News: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ನಿನ್ನೆ ಅಂದರೆ ಆಗಸ್ಟ್‌ 22ರಂದು ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ಜರುಗಿತ್ತು. ಈ ವೇಳೆ ಸೌಂಡ್‌ಬಾಕ್ಸ್ ಮತ್ತು ಲೈಟಿಂಗ್ಸ್ ಸೆಟಪ್ ಬಿದ್ದು ಕೆಲವರು ಗಾಯಗ"ಂಡಿದ್ದಾರೆ.

ವೇದಿಕೆ ಮೇಲೆ ಯಶ್ ಮಾತನಾಡುವಾಗಲೇ ಈ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಯುವತಿಗೆ ಪೆಟ್ಟಾಗಿ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ವೇದಿಕೆ ಮೇಲಿದ್ದ ಯಶ್, ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಲ್ಲದೇ, ಕ್ಷಮೆ ಕೇಳಿದರು. ಅಲ್ಲದೇ, ಎಲ್ಲರೂ ಶಾಂತ ರೀತಿಯಿಂದ ವರ್ತಿಸಬೇಕು. ಗಲಾಟೆ ಮಾಡಬೇಡಿ ಎಂದು ಯಶ್ ಮನವಿ ಮಾಡಿದ್ದಾರೆ.

ಇನ್ನು ಘಟನೆಗೆ ಕಾರಣವೇನೆಂದರೆ, ವೇದಿಕೆಯ ಹತ್ತಿರ ಬರಲು ಕೆಲವು ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ಸೌಂಡ್‌ಬಾಕ್ಸ್ ಹಾಗೂ ಫ್ಲಡ್‌ಲೈಟ್ ಅಳವಡಿಸಿದ್ದ ಕಂಬಗಳನ್ನು ಹತ್ತಲು ಯತ್ನಿಸಿದ್ದಾರೆ. ಅತಿಯಾದ ಜನಸ್ತೋಮ ಹಾಗೂ ತಳ್ಳಾಟದಿಂದಾಗಿ ಬೃಹತ್ ಸೌಂಡ್‌ಬಾಕ್ಸ್ ಮತ್ತು ಲೈಟಿಂಗ್ ಕಂಬಗಳು ಏಕಾಏಕಿ ಕುಸಿದುಬಿದ್ದಿವೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV