Dailyhunt Logo
  • Light mode
    Follow system
    Dark mode
    • Play Story
    • App Story
Sandalwood: ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಸಂಚಲನ ಸೃಷ್ಟಿಸಿದ 'ಅನ್ವೇಷಣಂ': ಕನ್ನಡಿಗರ ಮಹತ್ವಾಕಾಂಕ್ಷೆಯ ಹೆಜ್ಜೆ.

Sandalwood: ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಸಂಚಲನ ಸೃಷ್ಟಿಸಿದ 'ಅನ್ವೇಷಣಂ': ಕನ್ನಡಿಗರ ಮಹತ್ವಾಕಾಂಕ್ಷೆಯ ಹೆಜ್ಜೆ.

Karnataka TV 13 hrs ago

Sandalwood: ವಿಶ್ವದಾದ್ಯಂತ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರುತ್ತಿದ್ದು, ಅಮೆರಿಕದ ಟೆಕ್ಸಾಸ್‌ನ ಆಸ್ಟಿನ್ ನಗರದಲ್ಲೂ ಕನ್ನಡ ಸಿನಿಮಾಗಳ ಹೊಸ ಶಕೆ ಆರಂಭವಾಗಿದೆ.

ಸಂಗೀತ ಮಾಂತ್ರಿಕ ಮನೋಮೂರ್ತಿಯವರ ಸಾರಥ್ಯದಲ್ಲಿ ಬಿಡುಗಡೆಯಾಗಿರುವ 'ಅನ್ವೇಷಣಂ' ಚಿತ್ರವು ಕನ್ನಡ ಭಾಷೆ ಎಲ್ಲೆಡೆ ವಿಸ್ತರಿಸುವುದಕ್ಕೆ ಸಾಕ್ಷಿಯಾಗಿದೆ.

ಈ ಚಿತ್ರಕ್ಕೆ ಯುವ ಪ್ರತಿಭೆ ಅಮೋಗ್ ವಿಜಯ್ ಅವರ ನಿರ್ದೇಶನವಿದ್ದು, ರೋಹಿತ್ ಗೋವಿಂದರಾಜ್ ಅವರ screenplay ಹಾಗು ಮನೋಮೂರ್ತಿಯವರು ಸಂಗೀತ ನಿರ್ದೇಶನವನ್ನೂ ವಹಿಸಿಕೊಂಡಿದ್ದಾರೆ. ಚಿತ್ರದ ನಿರೀಕ್ಷಿತ ವೈಭವವು ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ.

ಅಮೆರಿಕದ ಕನ್ನಡಿಗರು ಚಿತ್ರರಂಗವನ್ನು ಒಂದು ಹೊಸ ದೃಷ್ಟಿಕೋನದಲ್ಲಿ ಪ್ರಸ್ತುತಪಡಿಸುತ್ತಿದ್ದು, 'ಅನ್ವೇಷಣಂ' ಚಿತ್ರವು ಯಾವುದೇ ದೇಶದಲ್ಲಿಯೂ ಅತ್ಯುತ್ತಮ ಕನ್ನಡ ಸಿನಿಮಾಗಳನ್ನು ನಿರ್ಮಿಸಬಹುದು ಎಂಬುದನ್ನು ಸಾಬೀತುಪಡಿಸುತ್ತಿದೆ.

ಶೀಘ್ರದಲ್ಲೇ ಚಿತ್ರದ ತಾರಾಗಣವನ್ನು ಬಹಿರಂಗಪಡಿಸಲಾಗುವುದು. ಕನ್ನಡಿಗರ ಹೆಮ್ಮೆಯ ಈ ಸಿನಿಮಾವು ಖಂಡಿತವಾಗಿಯೂ ದೊಡ್ಡ ಬ್ಲಾಕ್‌ಬಸ್ಟರ್ ಆಗಲಿದೆ ತಂಡಕ್ಕೆ ಆಶೆಯವಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV