Dailyhunt Logo
  • Light mode
    Follow system
    Dark mode
    • Play Story
    • App Story
10 ವರ್ಷ ಸೇವೆ ಸಲ್ಲಿಸಿದರೂ ಕೈ ತಪ್ಪಬಹುದು ಪಿಂಚಣಿ : ಖಾಸಗಿ ಉದ್ಯೋಗಿಗಳಿಗೆ ಇದು ಕಟ್ಟೆಚ್ಚರ

10 ವರ್ಷ ಸೇವೆ ಸಲ್ಲಿಸಿದರೂ ಕೈ ತಪ್ಪಬಹುದು ಪಿಂಚಣಿ : ಖಾಸಗಿ ಉದ್ಯೋಗಿಗಳಿಗೆ ಇದು ಕಟ್ಟೆಚ್ಚರ

Karnatakanewsbeat 2 weeks ago

ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ನಿವೃತ್ತಿಯ ನಂತರ ಮಾಸಿಕ ಪಿಂಚಣಿ (Monthly Pension) ಸೌಲಭ್ಯವನ್ನು ಪಡೆಯಲು ಕನಿಷ್ಠ 10 ವರ್ಷಗಳ ಕಾಲ ಅರ್ಹ ಸೇವೆ ಅಥವಾ ನಿರಂತರ ಕೊಡುಗೆ ನೀಡುವುದು ಅತ್ಯಂತು ಮುಖ್ಯ ಎಂದು ಇಪಿಎಫ್ ಒ ಸ್ಪಷ್ಟಪಡಿಸಿದೆ.

ಹಾಗಾಗಿ, ಉದ್ಯೋಗಿಗಳು ಅವಧಿಗೂ ಮುನ್ನ ಪಿಎಫ್ ಮೊತ್ತವನ್ನು ಹಿಂಪಡೆಯುವುದು ಪಿಂಚಣಿ ಪಡೆಯಲು ಅಡಚಣೆಯಾಗಲಿದೆ.

ಸದಸ್ಯರು ತುರ್ತು ಅಗತ್ಯಗಳಿಗಾಗಿ ಅಥವಾ ಕೆಲಸ ಬದಲಾಯಿಸುವ ಸಂದರ್ಭದಲ್ಲಿ 10 ವರ್ಷಗಳು ಪೂರ್ಣಗೊಳ್ಳುವ ಮುಂಚೆಯೇ ಪಿಎಫ್ (PF) ಖಾತೆಯಿಂದ ಹಣವನ್ನು ಹಿಂಪಡೆಯುವುದರಿಂದ ಸೇವಾ ಅವಧಿಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದರಿಂದಾಗಿ ನಿವೃತ್ತಿಯ ನಂತರ ಸಿಗಬೇಕಾದ ಪಿಂಚಣಿ ಲಾಭದಿಂದ ವಂಚಿತರಾಗಬೇಕಾಗುತ್ತದೆ ಎಂದು ಇಪಿಎಫ್‌ಒ ಎಚ್ಚರಿಸಿದೆ.

ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಇಪಿಎಫ್‌ಒ, "ಮಾಸಿಕ ಪಿಂಚಣಿಗೆ ಅರ್ಹರಾಗಲು 10 ವರ್ಷಗಳ ಕೊಡುಗೆಯನ್ನು ಪೂರ್ಣಗೊಳಿಸಬೇಕು. ಇದರ ಮಧ್ಯದಲ್ಲಿ ಹಣವನ್ನು ಹಿಂಪಡೆಯುವುದರಿಂದ ನಿಮ್ಮ ಸೇವಾ ಅವಧಿಯ ಮೇಲೆ ಪರಿಣಾಮ ಬೀರಬಹುದು ಮತ್ತು ನಿವೃತ್ತಿಯ ನಂತರ ಪಿಂಚಣಿ ಸೌಲಭ್ಯ ಸಿಗದಿರಬಹುದು" ಎಂದು ತಿಳಿಸಿದೆ.

ಆದ್ದರಿಂದ, ಉದ್ಯೋಗಿಗಳು ತಮ್ಮ ನಿವೃತ್ತಿ ಜೀವನವನ್ನು ಆರ್ಥಿಕವಾಗಿ ಭದ್ರಪಡಿಸಿಕೊಳ್ಳಲು ಮತ್ತು ಭವಿಷ್ಯದ ಪಿಂಚಣಿ ಸೌಲಭ್ಯವನ್ನು ಕಳೆದುಕೊಳ್ಳದಿರಲು, ಅಲ್ಪಾವಧಿಯ ಅಗತ್ಯಗಳಿಗಾಗಿ ಪಿಎಫ್ ಹಣವನ್ನು ಹಿಂಪಡೆಯುವುದನ್ನು ತಪ್ಪಿಸಬೇಕು. ನಿವೃತ್ತಿ ಯೋಜನೆಯನ್ನು ರೂಪಿಸುವಾಗ ಇಪಿಎಫ್ ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಇಪಿಎಫ್‌ಒಗೆ ಸುಮಾರು 7 ಕೋಟಿಗೂ ಸದಸ್ಯರಿರುವುದರಿಂದ ಹೊಸ ಎಚ್ಚರಿಕೆಯು ಮಹತ್ವದ್ದಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat