Dailyhunt Logo
  • Light mode
    Follow system
    Dark mode
    • Play Story
    • App Story
ಆನ್‌ಲೈನ್ ವಂಚನೆ ತಡೆಗೆ ಬ್ಯಾಂಕ್‌ಗಳಿಂದ ಹೊಸ ಕ್ರಮ : UPI ಪಾವತಿದಾರರಿಗೆ ಅನುಕೂಲ!

ಆನ್‌ಲೈನ್ ವಂಚನೆ ತಡೆಗೆ ಬ್ಯಾಂಕ್‌ಗಳಿಂದ ಹೊಸ ಕ್ರಮ : UPI ಪಾವತಿದಾರರಿಗೆ ಅನುಕೂಲ!

Karnatakanewsbeat 2 weeks ago

ಬೆಂಗಳೂರು : ದೇಶದಲ್ಲಿ ಆನ್ ಲೈನ್ ವಂಚನೆಗಳು ಮತ್ತು ಸೈಬರ್ ಅಪರಾಧಗಳು ದಿನೇದಿನೆ ಹೆಚ್ಚಾಗುತ್ತಲೇ ಇವೆ. ಆನ್ ಲೈನ್ ವಂಚನೆ ಕುರಿತು ಜಾಗೃತಿ ಮೂಡಿಸುತ್ತಿದ್ದರೂ ಜನರಿಗೆ ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಹಣ ದುಪ್ಪಟ್ಟುಗೊಳಿಸುವುದು, ಡಿಜಿಟಲ್ ಅರೆಸ್ಟ್, ಕ್ರೆಡಿಟ್ ಕಾರ್ಡ್ ಆಫರ್ ಸೇರಿ ಹಲವು ರೀತಿ ವಂಚಿಸಲಾಗುತ್ತಿದೆ.

ಇದನ್ನು ತಡೆಗಟ್ಟುವ ದಿಸೆಯಲ್ಲಿ ಬ್ಯಾಂಕುಗಳು ಈಗ ಹೊಸ ಹೆಜ್ಜೆ ಇರಿಸಲು ಮುಂದಾಗಿವೆ.

ಹೌದು, ಯುಪಿಐ (UPI) ಪಾವತಿಗಳನ್ನು ಮತ್ತಷ್ಟು ಸುರಕ್ಷಿತಗೊಳಿಸಲು ಪ್ರಮುಖ ಬ್ಯಾಂಕ್ ಗಳು ಹೊಸದೊಂದು ಪ್ರಸ್ತಾವನೆಯನ್ನು ಮುಂದಿಟ್ಟಿವೆ. ಅನುಮಾನಾಸ್ಪದ ಅಥವಾ ಅಪಾಯಕಾರಿ ಯುಪಿಐ ವಹಿವಾಟುಗಳ ಸಂದರ್ಭದಲ್ಲಿ ಗ್ರಾಹಕರಿಗೆ 'ಹೌದು ಅಥವಾ ಇಲ್ಲ' (Yes/No) ದೃಢೀಕರಣ ಎಚ್ಚರಿಕೆಯನ್ನು ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಬ್ಯಾಂಕ್ ಗಳು ಚಿಂತನೆ ನಡೆಸಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ಆನ್ ಲೈನ್ ವಂಚನೆ ಕುರಿತು ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಬ್ಯಾಂಕ್ ಗಳು ಈ ಸಲಹೆ ನೀಡಿವೆ. ನಕಲಿ ಕರೆಗಳು, ಬೆದರಿಕೆಗಳು ಮತ್ತು ಡೀಪ್ ಫೇಕ್ ವಂಚನೆಗಳನ್ನು ತಡೆಯಲು ಆರ್ಬಿಐ ಕೆಲವು ಕಠಿಣ ನಿಯಮಗಳನ್ನು ಪ್ರಸ್ತಾಪಿಸಿತ್ತು. ಹಾಗಾಗಿ, ಬ್ಯಾಂಕ್ ಗಳು ಹೊಸ ಪ್ರಸ್ತಾಪವನ್ನು ಮುಂದೆ ಇರಿಸಿವೆ. ಗ್ರಾಹಕರು ದೊಡ್ಡ ಮೊತ್ತವನ್ನು ಯುಪಿಐ ಮೂಲಕ ವರ್ಗಾಯಿಸಲು ಮುಂದಾದಾಗ ಅವರು "ಯೆಸ್ ಆರ್ ನೋ'' ಎಂಬ ಆಯ್ಕೆ ನೀಡಲು ಚಿಂತನೆ ನಡೆಸುತ್ತಿವೆ.

ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದೆ. ಬ್ಯಾಂಕ್ ಗಳ ವಂಚನೆ ಪತ್ತೆ ವ್ಯವಸ್ಥೆಯು ಅನುಮಾನಾಸ್ಪದವೆಂದು ಗುರುತಿಸಿದಾಗ "ಯೆಸ್ ಆರ್ ನೋ'' ಆಯ್ಕೆ ಕಾಣಿಸುತ್ತದೆ. ಆಗ ಗ್ರಾಹಕರು ಎಚ್ಚರಿಕೆಯಿಂದ ಹಣ ಕಳುಹಿಸಲು ಸಾಧ್ಯವಾಗಲಿದೆ ಎಂಬುದು ಬ್ಯಾಂಕ್ ಗಳ ಲೆಕ್ಕಾಚಾರವಾಗಿದೆ.

ಹೊಸ ನಿಯಮಗಳ ಪ್ರಕಾರ, ಹಣ ಕಳುಹಿಸುವ ಮೊದಲು ಬಳಕೆದಾರರು ಕೆಲವು ಪ್ರಮುಖ ಭದ್ರತಾ ತಪಾಸಣೆಗಳನ್ನು (Safety Checks) ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ವಿಶೇಷವಾಗಿ ಹೊಸ ವ್ಯಕ್ತಿಗಳಿಗೆ ಅಥವಾ ಅಪರಿಚಿತ ಯುಪಿಐ ಐಡಿಗಳಿಗೆ ಹಣ ವರ್ಗಾವಣೆ ಮಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಆರ್ ಬಿಐ ಸೂಚಿಸಿದೆ. ಫೋನ್ ಪೇ, ಗೂಗಲ್ ಪೇ ಅಥವಾ ಇತರೆ ಯಾವುದೇ ಡಿಜಿಟಲ್ ವ್ಯಾಲೆಟ್ ಬಳಸುವಾಗ ಗ್ರಾಹಕರು ಸ್ವೀಕೃತದಾರರ ಹೆಸರು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಶೀಘ್ರದಲ್ಲೇ ಹೊಸ ನಿಯಮಗಳು ಜಾರಿಗೆ ಬರಲಿವೆ ಎನ್ನಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat