Dailyhunt Logo
  • Light mode
    Follow system
    Dark mode
    • Play Story
    • App Story

ಆಟೋ ಚಾಲಕರಿಗೆ ಮತ್ತೆ ಶಾಕ್‌ - LPG ಗ್ಯಾಸ್​ ದರ ಹೆಚ್ಚಳ!

Karnatakanewsbeat 3 weeks ago

ಬೆಂಗಳೂರು : ನಗರದಲ್ಲಿ ದಿನನಿತ್ಯ ಜೀವನ ಸಾಗಿಸುವ ಆಟೋ ಚಾಲಕರಿಗೆ ಮತ್ತೊಂದು ಹೊಡೆತ ಬಿದ್ದಿದೆ. ಇಂದಿನಿಂದ ಆಟೋ LPG ಗ್ಯಾಸ್ ದರದಲ್ಲಿ 5 ರೂಪಾಯಿ 73 ಪೈಸೆಯಷ್ಟು ಏರಿಕೆ ಆಗಿದ್ದು, ಚಾಲಕರ ಖರ್ಚು ಮತ್ತಷ್ಟು ಹೆಚ್ಚಾಗಿದೆ.

ನಿನ್ನೆವರೆಗೆ ಲೀಟರ್‌ಗೆ 89.35 ರೂಪಾಯಿ ಇದ್ದ ಆಟೋ LPG ದರ, ಇಂದಿನಿಂದ 95.08 ರೂಪಾಯಿಗೆ ಏರಿಕೆಯಾಗಿದೆ.

ಈ ದರ ಏರಿಕೆ ಸರ್ಕಾರದ ನಿಯಂತ್ರಣದಲ್ಲಿರುವ ಆಟೋ LPG ಬಂಕ್‌ಗಳಲ್ಲಿ ಅನ್ವಯವಾಗಿದ್ದು, ಚಾಲಕರು ಹೆಚ್ಚಿನ ವೆಚ್ಚವನ್ನು ಭರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಖಾಸಗಿ LPG ಬಂಕ್‌ಗಳಲ್ಲಿ ದರ ಏರಿಕೆ ಒಂದೇ ರೀತಿಯಲ್ಲಿ ಇಲ್ಲದೆ, ಬಂಕ್‌ಗಿಂತ ಬಂಕ್‌ಗೆ ದರದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಇದರಿಂದ ಚಾಲಕರಲ್ಲಿ ಗೊಂದಲವೂ ಹೆಚ್ಚಾಗಿದೆ.

ಇಂಧನ ದರ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಆಟೋ ಚಾಲಕರು, ಬಾಡಿಗೆ ಹೆಚ್ಚಿಸುವ ಕುರಿತು ಚಿಂತನೆ ನಡೆಸುವ ಸಾಧ್ಯತೆ ಇದೆ. ಇದರ ಪರಿಣಾಮ ಪ್ರಯಾಣಿಕರ ಮೇಲೂ ಬೀಳುವ ಸಾಧ್ಯತೆ ಇದೆ. LPG ದರ ಏರಿಕೆ ನಗರ ಸಾರಿಗೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಲಕ್ಷಣಗಳು ಕಾಣಿಸುತ್ತಿವೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat