ಅಮೆರಿಕ ಹಾಗೂ ಇರಾನ್ ನಡುವಿನ ಮೂರು ತಿಂಗಳ ಯುದ್ಧಕ್ಕೆ ಶೀಘ್ರದಲ್ಲೇ ಅಂತಿಮ ತೆರೆ ಬೀಳುವ ಸಾಧ್ಯತೆಗಳು ಕಾಣಿಸುತ್ತಿವೆ. ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದ್ದ ಈ ಕದನ ಅಂತ್ಯವಾಗುವ ನಿರೀಕ್ಷೆ ಮೂಡಿದೆ.
ಶಾಂತಿ ಮಾತುಕತೆಗಳು ಅಂತಿಮ ಹಂತ ತಲುಪಿದ್ದು, ಕೆಲ ಪ್ರಮುಖ ಒಪ್ಪಂದಗಳು ಮಾತ್ರ ಬಾಕಿಯಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಈ ಕುರಿತು ತಮ್ಮ 'ಟ್ರೂತ್ ಸೋಷಿಯಲ್' ಜಾಲತಾಣದಲ್ಲಿ ಟ್ರಂಪ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಇರಾನ್ ಜೊತೆಗೆ ನಡೆದ ಮಾತುಕತೆಗಳು "ಬಹಳ ಉತ್ತಮವಾಗಿ ನಡೆದಿವೆ" ಎಂದು ಟ್ರಂಪ್ ಹೇಳಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೂ ಪ್ರತ್ಯೇಕ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಒಪ್ಪಂದದ ಭಾಗವಾಗಿ ಜಾಗತಿಕ ತೈಲ ಸಾಗಣೆಗೆ ಅತ್ಯಂತ ಮಹತ್ವದ ಹೊರ್ಮುಜ್ ಜಲಸಂಧಿಯನ್ನು ಶೀಘ್ರವೇ ಪುನಃ ತೆರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ಆರ್ಥಿಕತೆಯ ಮೇಲೆ ಇದ್ದ ಒತ್ತಡ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಆದರೆ ಒಪ್ಪಂದ ಇನ್ನೂ ಅಧಿಕೃತವಾಗಿ ಅಂತಿಮಗೊಂಡಿಲ್ಲ. ಇರಾನ್ ಪರದಿಂದಲೂ ಕೆಲವು ಷರತ್ತುಗಳ ಬಗ್ಗೆ ಚರ್ಚೆಗಳು ಮುಂದುವರಿದಿವೆ ಎಂದು ವರದಿಗಳು ತಿಳಿಸಿವೆ.
