Dailyhunt Logo
  • Light mode
    Follow system
    Dark mode
    • Play Story
    • App Story

ಬೆಂಗಳೂರು ವಾಹನ ಸವಾರರೇ ಎಚ್ಚರ.. ನಗರದಲ್ಲಿ ಹೆಚ್ಚುತ್ತಿವೆ 'ಬ್ಲಾಕ್ ಸ್ಪಾಟ್' ಅಪಾಯ!

Karnatakanewsbeat 1 month ago

ಬೆಂಗಳೂರು : ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಒಂದೆಡೆ ಇದ್ದರೆ, ಮತ್ತೊಂದೆಡೆ ರಸ್ತೆ ಅಪಘಾತಗಳು ವಾಹನ ಸವಾರರಲ್ಲಿ ಆತಂಕ ಹೆಚ್ಚಿಸುತ್ತಿವೆ. ಅಪಘಾತಗಳು ಹೆಚ್ಚಾಗಿ ನಡೆಯುತ್ತಿರುವ ಸ್ಥಳಗಳನ್ನು 'ಬ್ಲಾಕ್ ಸ್ಪಾಟ್' ಎಂದು ಗುರುತಿಸಿರುವ ಜಿಬಿಎ, ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಂಡಿದೆ.

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ, ಅಪಘಾತಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅಪಾಯಕಾರಿಯಾದ ರಸ್ತೆಗಳು ಮತ್ತು ಜಂಕ್ಷನ್‌ಗಳನ್ನು ಗುರುತು ಮಾಡಿ, ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

ಬ್ಲಾಕ್ ಸ್ಪಾಟ್‌ಗಳ ಸಂಖ್ಯೆ ಎಷ್ಟು?

  • ಬೆಂಗಳೂರು ಹೊರವಲಯದಲ್ಲಿ : 11 ಬ್ಲಾಕ್ ಸ್ಪಾಟ್‌ಗಳು
  • ನಗರ ಒಳಭಾಗದಲ್ಲಿ : ಸುಮಾರು 70 ಬ್ಲಾಕ್ ಸ್ಪಾಟ್‌ಗಳು
  • 2019 ರಿಂದ 2025 ಡಿಸೆಂಬರ್ ವರೆಗೆ ಹೊರವಲಯದಲ್ಲೇ 287 ಅಪಘಾತಗಳು ದಾಖಲಾಗಿವೆ.

ಹೊರವಲಯದ ಅಪಾಯಕಾರಿ ಬ್ಲಾಕ್ ಸ್ಪಾಟ್‌ಗಳು

  • ಹೆಬ್ಬಗೋಡಿ ಮೆಟ್ರೋ ಸ್ಟೇಷನ್ ರಸ್ತೆ - 38 ಅಪಘಾತ
  • ಕಿತ್ತಗನಹಳ್ಳಿ ಬಸ್ ಸ್ಟಾಪ್ - 28
  • ವೀರಸಂಧ್ರ ಬಸ್ ಸ್ಟಾಪ್ - 18
  • ಎಲೆಕ್ಟ್ರಾನಿಕ್ ಸಿಟಿ ಟು ಪ್ಲಾಜಾ - 37
  • ಅತ್ತಿಬೆಲೆ ಜಂಕ್ಷನ್ - 27
  • ಅತ್ತಿಬೆಲೆ ಟೋಲ್ ಗೇಟ್ - 25
  • ಬ್ಯಾಟರಾಯನಪುರ ಜಂಕ್ಷನ್ - 25.

ನಗರ ಒಳಭಾಗದ ಪ್ರಮುಖ ಬ್ಲಾಕ್ ಸ್ಪಾಟ್‌ಗಳು

  • ಉಪ್ಪಾರಪೇಟೆ ಟ್ಯಾಂಕ್ ಬಂಡ್ ರೋಡ್
  • ಮೈಸೂರು ರೋಡ್ ಡೌನ್ ರ್ಯಾಂಪ್
  • ಕಾಮಾಕ್ಷಿಪಾಳ್ಯ ಮಾದೇಶ್ವರ ದೇವಸ್ಥಾನದಿಂದ ನಾಗರಭಾವಿ ವರೆಗೆ ಅಂಡರ್‌ಪಾಸ್
  • ಕೆ.ಆರ್.ಮಾರ್ಕೆಟ್ ಫ್ಲೈಓವರ್ (ಚಿಕ್ಕಪೇಟೆ ವ್ಯಾಪ್ತಿ)
  • ಹಲಸೂರು ಕಮಾಂಡೋ ಆಸ್ಪತ್ರೆಯಿಂದ ಅರಳಿಕಟ್ಟೆ ಜಂಕ್ಷನ್ ರಸ್ತೆ
  • ವೈಟ್‌ಫೀಲ್ಡ್ ಮೇನ್ ರೋಡ್ ಜಂಕ್ಷನ್
  • ಓಲ್ಡ್ ಬೈಯಪ್ಪನಹಳ್ಳಿ ಫ್ಲೈಓವರ್.

ತಡೆ ಕ್ರಮಗಳು ಏನು?

  • ರಸ್ತೆ ಮಾರ್ಕಿಂಗ್ ಸುಧಾರಣೆ,
  • ಬ್ಲಿಂಕರ್ ಮತ್ತು ಸಿಗ್ನಲ್ ವ್ಯವಸ್ಥೆ,
  • ರೋಡ್ ಲೈನ್ ಹಾಗೂ ಸ್ಪೀಡ್ ಬ್ರೇಕರ್ ಅಳವಡಿಕೆ
  • ಅಪಾಯಕಾರಿ ತಿರುವುಗಳಲ್ಲಿ ಸೂಚನಾ ಫಲಕಗಳು ಅಳವಡಿಕೆ.

ಒಟ್ಟಾರೆ ಬೆಂಗಳೂರು ನಗರದಲ್ಲಿ ವಾಹನಗಳ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಟ್ರಾಫಿಕ್ ಮತ್ತು ಅಪಘಾತ ಸಮಸ್ಯೆಗಳು ಹೆಚ್ಚಾಗುತ್ತಿವೆ. ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ಸುಧಾರಣೆ ಮಾಡುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಜಿಬಿಎ ಮತ್ತು ಸಂಚಾರಿ ಪೊಲೀಸರು ಸಮನ್ವಯದಿಂದ ಕೆಲಸ ಮಾಡಬೇಕಿದೆ.

ಇದನ್ನೂ ಓದಿ :ಬೆಂಗಳೂರಿನಲ್ಲಿ ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ!

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat