Dailyhunt Logo
  • Light mode
    Follow system
    Dark mode
    • Play Story
    • App Story

ಭೀಮಾ ನದಿಯಲ್ಲಿ ಈಜಾಡಲು ಹೋಗಿ 15 ವರ್ಷದ ಬಾಲಕ ದಾರುಣ ಸಾವು!

Karnatakanewsbeat 3 weeks ago

ಲಬುರಗಿ : ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಭೀಮಾ ನದಿಯಲ್ಲಿ ಈಜಾಡಲು ಹೋಗಿದ್ದ 15 ವರ್ಷದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಅಫಜಲಪುರ ತಾಲೂಕಿನ ಭೋಸಗಾ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ವಿಶ್ವನಾಥ ಮುಜಗೊಂಡ ಎಂದು ಗುರುತಿಸಲಾಗಿದೆ.

ಇವನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ನಿವಾಸಿಯಾಗಿದ್ದು, ಭೋಸಗಾ ಗ್ರಾಮದ ಶ್ರೀ ಹೊನ್ನಲಿಂಗೇಶ್ವರ ಜಾತ್ರೆಗೆ ಕುಟುಂಬದವರೊಂದಿಗೆ ಆಗಮಿಸಿದ್ದನು.

ಜಾತ್ರೆಯ ವೇಳೆ ಸೋದರ ಮಾವನ ಜೊತೆ ಭೀಮಾ ನದಿಗೆ ಈಜಾಡಲು ಇಳಿದಿದ್ದ ವಿಶ್ವನಾಥ್, ಅಚಾನಕ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ಥಳೀಯರು ಹಾಗೂ ಕುಟುಂಬದವರು ತಕ್ಷಣ ಹುಡುಕಾಟ ನಡೆಸಿದರೂ ಬಾಲಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಈ ಘಟನೆ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat