Dailyhunt Logo
  • Light mode
    Follow system
    Dark mode
    • Play Story
    • App Story
ಎಸ್‌ಬಿಐ-ಗೂಗಲ್ ಪೇ ಹೊಸ ಕ್ರೆಡಿಟ್ ಕಾರ್ಡ್ : ವರ್ಷಕ್ಕೆ 18 ಸಾವಿರ ರೂ. ಭರ್ಜರಿ ಲಾಭ

ಎಸ್‌ಬಿಐ-ಗೂಗಲ್ ಪೇ ಹೊಸ ಕ್ರೆಡಿಟ್ ಕಾರ್ಡ್ : ವರ್ಷಕ್ಕೆ 18 ಸಾವಿರ ರೂ. ಭರ್ಜರಿ ಲಾಭ

ಬೆಂಗಳೂರು : ದೇಶದ ಸಾರ್ವಜನಿಕ ವಲಯದ ಬೃಹತ್ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಹಾಗೂ ಡಿಜಿಟಲ್ ಪೇಮೆಂಟ್ ಅಗ್ರಿಗೇಟರ್ ಆಗಿರುವ ಗೂಗಲ್ ಪೇ ಈಗ ಜಂಟಿಯಾಗಿ ಹೊಸ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಿವೆ. "ಗೂಗಲ್ ಪೇ ಫ್ಲೆಕ್ಸ್ ಎಸ್ ಬಿಐ ಕಾರ್ಡ್" ಎಂಬ ಹೊಸ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಲಾಗಿದ್ದು, ಗ್ರಾಹಕರಿಗೆ ವರ್ಷಕ್ಕೆ ಸಾವಿರಾರು ರೂಪಾಯಿ ಉಳಿತಾಯವಾಗಲಿದೆ ಎಂದು ಎರಡೂ ಕಂಪನಿಗಳು ತಿಳಿಸಿವೆ.

ಹೊಸ ಕ್ರೆಡಿಟ್ ಕಾರ್ಡ್ ತೆಗೆದುಕೊಂಡವರಿಗೆ ಒಂದು ವರ್ಷದಲ್ಲಿ 18 ಸಾವಿರ ರೂಪಾಯಿವರೆಗೆ ವಿವಿಧ ಆಫರ್‌ಗಳು, ಬೆನಿಫಿಟ್ ಗಳು ಲಭಿಸುತ್ತವೆ. ಅದರಲ್ಲೂ, ನಿಯಮಿತವಾಗಿ ಕ್ರೆಡಿಟ್ ಕಾರ್ಡ್ ಮೂಲಕವೇ ಗೃಹಬಳಕೆ ವಸ್ತುಗಳನ್ನು ಖರೀದಿಸುವವರು, ಮೊಬೈಲ್ ರಿಚಾರ್ಜ್ ಸೇರಿ ಹಲವು ಯುಟಿಲಿಟಿ ಬಿಲ್ ಪಾವತಿಸುವವರು, ಶಾಪಿಂಗ್ ಮಾಡುವವರಿಗೆ ಇದು ಒಳ್ಳೆಯ ಆಫರ್ ಗಳನ್ನು ನೀಡುತ್ತದೆ. ಇದರಿಂದ ಗ್ರಾಹಕರು ಹಣ ಉಳಿಸಬಹುದಾಗಿದೆ.

ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಬಳಸಿದಾಗ ಪಾಯಿಂಟ್ಸ್ ನೀಡಲಾಗುತ್ತದೆ. ಆದರೆ, ಹೊಸ ಕ್ರೆಡಿಟ್ ಕಾರ್ಡ್ ಹೊಂದಿದವರಿಗೆ "ಸ್ಟಾರ್"ಗಳ ಲೆಕ್ಕದಲ್ಲಿ ಪಾಯಿಂಟ್ಸ್ ನೀಡಲಾಗುತ್ತದೆ. ಪ್ರತಿ ಬಾರಿ 500 ರೂಪಾಯಿ ಖರ್ಚು ಮಾಡಿದಾಗಲೂ 8 ಸ್ಟಾರ್ ಗಳನ್ನು ನೀಡಲಾಗುತ್ತದೆ. ಒಂದು ಸ್ಟಾರ್ ಎಂದರೆ ಒಂದು ರೂಪಾಯಿ ರಿವಾರ್ಡ್ ಪಡೆದಂತೆಯೇ ಲೆಕ್ಕ. ಹಾಗಾಗಿ, ಜಾಸ್ತಿ ಹಣ ಖರ್ಚು ಮಾಡಿದಷ್ಟು ಹೆಚ್ಚು ಸ್ಟಾರ್ ಗಳು ಲಭಿಸುತ್ತವೆ. ಇವುಗಳನ್ನು ಬಳಸಿಕೊಂಡು ಶಾಪಿಂಗ್ ಮಾಡಬಹುದು.

ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್ ಪಡೆದು, ಮೊದಲ ಬಿಲ್ ಪೇ ಮಾಡಿದರೆ, ಗೂಗಲ್ ಪೇನಿಂದ ಖಾತೆಗೆ 500 ರೂಪಾಯಿ ಜಮೆಯಾಗುತ್ತದೆ. ಹಾಗೆಯೇ, ಇನ್ನೂ 500 ರೂಪಾಯಿ ಮೌಲ್ಯದ ಬೆನಿಫಿಟ್ಸ್ ಸಿಗಲಿವೆ. ಒಂದು ವರ್ಷಕ್ಕೆ 499 ರೂಪಾಯಿ ಮೇಂಟೇನನ್ಸ್ ಚಾರ್ಜ್ ವಿಧಿಸಲಾಗುತ್ತದೆ. ಒಂದು ವರ್ಷದಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ 1 ಲಕ್ಷ ರೂ. ಖರ್ಚು ಮಾಡಿದರೆ ಈ ಶುಲ್ಕವನ್ನೂ ರದ್ದುಗೊಳಿಸಲಾಗುತ್ತದೆ.

ಗಮನಿಸಿ: ಕ್ರೆಡಿಟ್ ಕಾರ್ಡ್ ಉಪಯೋಗಗಳ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಲೇಖನ ಪ್ರಕಟಿಸಲಾಗಿದೆ. ಯಾವುದೇ ಕ್ರೆಡಿಟ್ ಕಾರ್ಡ್ ಪಡೆಯುವ ಮುನ್ನ ಹಿಡನ್ ಅಥವಾ ಗೌಪ್ಯ ಶುಲ್ಕಗಳ ಬಗ್ಗೆ ಪರಿಶೀಲಿಸಿ. ಮಾಹಿತಿ ನೀಡುವುದಷ್ಟೇ ನಮ್ಮ ಉದ್ದೇಶ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat