Dailyhunt Logo
  • Light mode
    Follow system
    Dark mode
    • Play Story
    • App Story
FD ಬಡ್ಡಿ ದರದಲ್ಲಿ ಬದಲಾವಣೆ ಮಾಡಿದ SBI : ಹೂಡಿಕೆದಾರರಿಗೆ ಲಾಭವೋ? ನಷ್ಟವೋ?

FD ಬಡ್ಡಿ ದರದಲ್ಲಿ ಬದಲಾವಣೆ ಮಾಡಿದ SBI : ಹೂಡಿಕೆದಾರರಿಗೆ ಲಾಭವೋ? ನಷ್ಟವೋ?

Karnatakanewsbeat 2 weeks ago

ಬೆಂಗಳೂರು : ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಪ್ರಮುಖ ಬದಲಾವಣೆಗಳ ಬಗೆಗಿನ (SBI changes FD rates) ಮಾಹಿತಿಯನ್ನು ನೀಡಿದೆ. ಬ್ಯಾಂಕ್ ತನ್ನ ಕೆಲವು ನಿಶ್ಚಿತ ಹೂಡಿಕೆಯ (FD) ಬಡ್ಡಿ ದರಗಳಲ್ಲಿ ಬದಲಾವಣೆ ಮಾಡಿದೆ.

ಈ ಹೊಸ ಬದಲಾವಣೆಗಳು ಗ್ರಾಹಕರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ. ಕೆಲ ಎಫ್ ಡಿಗಳ ಮೇಲಿನ ಬಡ್ಡಿದರ ಇಳಿಕೆ ಮಾಡಿದ್ದು, ಹೂಡಿಕೆದಾರರಿಗೆ ಕಹಿ ಸುದ್ದಿ ಇದಾಗಿದೆ.

ಅಲ್ಪಾವಧಿ ಠೇವಣಿಗಳು: 7 ದಿನಗಳಿಂದ 14 ದಿನಗಳು, 15 ದಿನಗಳಿಂದ 45 ದಿನಗಳು ಹಾಗೂ 46 ದಿನಗಳಿಂದ 179 ದಿನಗಳವರೆಗಿನ ಅವಧಿಯ ಬಲ್ಕ್ ಎಫ್ ಡಿಗಳ ಬಡ್ಡಿ ದರವನ್ನು ಬ್ಯಾಂಕ್ ಶೇಕಡಾ 0.25ರಷ್ಟು (25 ಬೇಸಿಸ್ ಪಾಯಿಂಟ್ಸ್) ತಗ್ಗಿಸಿದೆ. ಇದರೊಂದಿಗೆ ಈ ದರಗಳು ಕ್ರಮವಾಗಿ ಶೇ.4.25, 4.75 ಹಾಗೂ 4.85ಕ್ಕೆ ಇಳಿದಿವೆ.

ಮಧ್ಯಮಾವಧಿ ಠೇವಣಿಗಳು: 180 ದಿನಗಳಿಂದ 210 ದಿನಗಳವರೆಗೆ ಮಾಗಿಯುವ ಬಲ್ಕ್ ಎಫ್ ಡಿಗಳ ಮೇಲೆ 10 ಬೇಸಿಸ್ ಪಾಯಿಂಟ್ಸ್ ಕಡಿತ ಮಾಡಲಾಗಿದ್ದು, ಬಡ್ಡಿ ದರವು ಶೇ.5.60ರಿಂದ ಶೇ.5.50ಕ್ಕೆ ತಲುಪಿದೆ. ಹಣದುಬ್ಬರದ ನಿಯಂತ್ರಣಕ್ಕಾಗಿ ಆರ್ ಬಿಐ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ ಸರ್ಕಾರಿ ಬ್ಯಾಂಕ್ ಈಗ ಬಡ್ಡಿದರ ಇಳಿಕೆ ಮಾಡಿರುವುದು ಗ್ರಾಹಕರಲ್ಲಿ ನಿರಾಸೆ ಮೂಡಿಸಿದೆ.

211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗೆ ಶೇ.5.60 ಬಡ್ಡಿ ಮುಂದುವರಿಯಲಿದೆ. 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಗೆ ಗರಿಷ್ಠ ಶೇ.6.25ರಷ್ಟು ಬಡ್ಡಿ ದೊರೆಯಲಿದೆ. 2 ರಿಂದ 3 ವರ್ಷಗಳವರೆಗೆ ಶೇ. 6.15 ಹಾಗೂ 3 ರಿಂದ 10 ವರ್ಷಗಳ ಅವಧಿಗೆ ಶೇ.6ರಷ್ಟು ಬಡ್ಡಿ ಸಿಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat