Dailyhunt Logo
  • Light mode
    Follow system
    Dark mode
    • Play Story
    • App Story

ಇನ್ಮುಂದೆ ಫುಟ್‌ಪಾತ್‌ನಲ್ಲಿ ಯಾರೂ ವ್ಯಾಪಾರ ಮಾಡುವಂತಿಲ್ಲ - ಡಿಸಿಎಂ ಡಿಕೆಶಿ ಖಡಕ್​ ಸೂಚನೆ!

Karnatakanewsbeat 3 weeks ago

ಬೆಂಗಳೂರು : ಬೆಂಗಳೂರಿನಲ್ಲಿ ನಿನ್ನೆ (ಏಪ್ರಿಲ್ 29) ಸಂಜೆ ಸುರಿದ ಆಲಿಕಲ್ಲು ಸಹಿತ ಧಾರಾಕಾರ ಮಳೆಗೆ ಭಾರೀ ಅನಾಹುತಗಳು ಸಂಭವಿಸಿದೆ. ಮಳೆಯಿಂದಾಗಿ ಶಿವಾಜಿನಗರ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಏಳು ಜನ ಸಾವಿನ ಮನೆ ಸೇರಿದ್ದಾರೆ. ಈ ಬೆನ್ನಲ್ಲೇ ಇನ್ಮುಂದೆ ಫುಟ್‌ಪಾತ್‌ನಲ್ಲಿ ಯಾರೂ ವ್ಯಾಪಾರ ಮಾಡುವಂತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಡಕ್​ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ರಸ್ತೆ ಮೇಲೆ ಬಿದ್ದಿರುವ ಮರದ ಕೊಂಬೆ ತೆರವು ಮಾಡಲು ಪೊಲೀಸರಿಗೆ ಈಗಾಗಲೇ ನಿರ್ದೇಶನವನ್ನೂ ನೀಡಿದ್ದೇನೆ. ಈಗಾಗಲೇ ನಗರದಾದ್ಯಂತ ಇರುವ ಸಮಸ್ಯೆ ಪಟ್ಟಿ ಮಾಡಲಾಗಿದೆ. ಎಲ್ಲಾ ಮಾಹಿತಿಯನ್ನ ಈಗ ಕಂಟ್ರೋಲ್ ರೂಂನಲ್ಲಿ ಕಲೆ ಹಾಕಿದ್ದಾರೆ. ಗೋಡೆ ಕುಸಿತ ಕೇಸ್​ನಲ್ಲಿ ಅಧಿಕಾರಿ ನಿರ್ಲಕ್ಷವೂ ಇದೆ ಎನ್ನಲ್ಲ. ಇನ್ಮುಂದೆ ಫುಟ್‌ಪಾತ್‌ನಲ್ಲಿ ಯಾರೂ ವ್ಯಾಪಾರ ಮಾಡುವಂತಿಲ್ಲ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

ಗೋಡೆ ಕುಸಿತ ಕೇಸ್​ನಲ್ಲಿ ಅಧಿಕಾರಿ ನಿರ್ಲಕ್ಷವೂ ಇದೆ ಎನ್ನಲ್ಲ, ಆದರೆ ಇನ್ಮುಂದೆ ಇಂತಹ ಅಪಾಯಕಾರಿ ಕಾಂಪೌಂಡ್ ಗೋಡೆಗಳನ್ನು ಮೊದಲೇ ಗುರುತಿಸಲು ಸೂಚಿಸಿದ್ದೇನೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಫುಟ್‌ಪಾತ್‌ಗಳ ಮೇಲೆ ಇನ್ಮುಂದೆ ಯಾವುದೇ ವ್ಯಾಪಾರವನ್ನು ನಡೆಸುವಂತಿಲ್ಲ. ಮುಖ್ಯವಾಗಿ ವಾಜಪೇಯಿ ಆಸ್ಪತ್ರೆ ಪಕ್ಕದಂತಹ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat