Dailyhunt Logo
  • Light mode
    Follow system
    Dark mode
    • Play Story
    • App Story
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ ಟ್ರೈನಿ ಪೈಲಟ್ ಮೃತ್ಯು!

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ ಟ್ರೈನಿ ಪೈಲಟ್ ಮೃತ್ಯು!

Karnatakanewsbeat 3 weeks ago

ಡುಪಿ : ಉತ್ತರಪ್ರದೇಶ ರಾಜ್ಯದ ಕಾನ್ಪುರದಲ್ಲಿ ಆ.27ರಂದು ಖಾಸಗಿ ತರಬೇತಿ ವೇಳೆ ವಿಮಾನ ಪತನಗೊಂಡ ಉಡುಪಿ ಮೂಲದ ಟ್ರೈನಿ ಪೈಲಟ್ ಮೃತಪಟ್ಟಿದ್ದಾರೆ.

ಅಭಿಷೇಕ್ ಪೂಜಾರಿ(22) ಎಂಬವರು ಮೃತ ಟ್ರೈನಿ ಪೈಲಟ್. ಇವರು ಪ್ರಸ್ತುತ ಮುಂಬೈನಲ್ಲಿ ವಾಸವಾಗಿರುವ ಮೂಲತಃ ಹಿರಿಯಡ್ಕ ಪೊಲೀಸ್‌ ಠಾಣಾ ವ್ಯಾಪ್ತಿಯ ಕಣಜಾರು ಗ್ರಾಮದ ಕಡೇಬೆರ್ಕೆ ಮೂಲದ ಪ್ರಭಾಕರ ಪೂಜಾರಿ ಹಾಗೂ ಶಶಿಕಲ ಪೂಜಾರಿ ದಂಪತಿಯ ಪುತ್ರ.

ಅಭಿಷೇಕ್ ಪೂಜಾರಿ ಉತ್ತರಪ್ರದೇಶದ ಕಾನ್ಪುರ ದಲ್ಲಿ ಸುಮಾರು ಎರಡೂವರೆ ವರ್ಷದಿಂದ ಖಾಸಗಿ ಟ್ರೈನಿ ಪೈಲೆಟ್ ಆಗಿ ತರಬೇತಿ ಪಡೆಯುತ್ತಿದ್ದರು. ಅಭಿಷೇಕ್ ಪೂಜಾರಿ ಆಗಾಗ್ಗೆ ತಮ್ಮ ಕುಟುಂಬದೊಂದಿಗೆ ತಾಯಿಯ ಸಹೋದರ ತಮ್ಮ ಜೀವನ್ ಕುಮಾ‌ರ್ ಅವರ ಮನೆಯಾದ ಕಣಜಾರು ಗ್ರಾಮದ ಕಡೇಬೆರ್ಕೆಗೆ ಬಂದು ಹೋಗುತ್ತಿರುವುದಾಗಿ ಮಾಹಿತಿ ತಿಳಿದುಬಂದಿದೆ.

ಕುಟುಂಬದವರು ಮುಂದಿನ ಪ್ರಕ್ರಿಯೆ ಬಗ್ಗೆ ಕಾನ್ಪುರ ಕ್ಕೆ ತೆರಳಿದ್ದು, ಕಾನೂನು ಪ್ರಕ್ರಿಯೆ ಜರುಗಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat