Dailyhunt Logo
  • Light mode
    Follow system
    Dark mode
    • Play Story
    • App Story
ಮಂಗಳೂರಲ್ಲಿ SIR ಎಡವಟ್ಟು : ಜೀವಂತ ವ್ಯಕ್ತಿಯನ್ನೇ 'ಮೃತ' ಎಂದು ಗುರುತಿಸಿದ ಚುನಾವಣಾ ಆಯೋಗ!

ಮಂಗಳೂರಲ್ಲಿ SIR ಎಡವಟ್ಟು : ಜೀವಂತ ವ್ಯಕ್ತಿಯನ್ನೇ 'ಮೃತ' ಎಂದು ಗುರುತಿಸಿದ ಚುನಾವಣಾ ಆಯೋಗ!

ಮಂಗಳೂರು : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಎಡವಟ್ಟೊಂದು ಬೆಳಕಿಗೆ ಬಂದಿದೆ. ಮಂಗಳೂರಿನ 61 ವರ್ಷದ ನಿವಾಸಿ ಡೊನಾಲ್ಡ್ ಜೋಸೆಫ್ ರೇಗೊ ಅವರು ಜೀವಂತವಾಗಿದ್ದರೂ, ದಾಖಲೆಗಳಲ್ಲಿ ಅವರನ್ನು 'ಮೃತ' ಎಂದು ಗುರುತಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೈ ನಿವಾಸಿಯಾಗಿರುವ ಡೊನಾಲ್ಡ್ ಜೋಸೆಫ್ ರೇಗೊ ಅವರ ಹೆಸರು ಆಗಸ್ಟ್ 24ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ ನಾಪತ್ತೆಯಾಗಿತ್ತು. ಬಳಿಕ ಪರಿಶೀಲನೆ ನಡೆಸಿದಾಗ ಅವರ ಹೆಸರನ್ನು Absent, Shifted, Duplicate, Dead and Others (ASDDO) ಪಟ್ಟಿಯಲ್ಲಿನ 'ಮೃತ' ವಿಭಾಗಕ್ಕೆ ಸೇರಿಸಿರುವುದು ಬೆಳಕಿಗೆ ಬಂದಿದೆ.

ಜೀವಂತ ವ್ಯಕ್ತಿಯನ್ನೇ ತಪ್ಪಾಗಿ ಮೃತ ಎಂದು ಗುರುತಿಸಿರುವ ಈ ಘಟನೆ SIR ಪ್ರಕ್ರಿಯೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳಿಂದ ಸ್ಪಷ್ಟನೆ ಹಾಗೂ ತಪ್ಪು ಸರಿಪಡಿಸುವ ಕ್ರಮದ ನಿರೀಕ್ಷೆಯಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat