Dailyhunt Logo
  • Light mode
    Follow system
    Dark mode
    • Play Story
    • App Story

ಪ್ರೀತಿಸುವುದಾಗಿ ನಂಬಿಸಿ 'ಕೈ'ಕೊಟ್ಟ ಕಾಂಗ್ರೆಸ್ ಮುಖಂಡ - ಲೈಂಗಿಕ ಸಂಪರ್ಕದ ಬಳಿಕ ಯುವತಿಗೆ ವಂಚನೆ!

Karnatakanewsbeat 3 weeks ago

ಮೈಸೂರು : ಜಿಲ್ಲೆಯ ಟಿ.ನರಸೀಪುರದ ಕಾಂಗ್ರೆಸ್‌ (Congress) ಮುಖಂಡ ಮದನ್‌ ರಾಜ್‌ ವಿರುದ್ಧ ಪ್ರೀತಿ ಹೆಸರಲ್ಲಿ ವಂಚಿಸಿದ ಆರೋಪ ಕೇಳಿ ಬಂದದ್ದು, ಈ ಬಗ್ಗೆ ಟಿ.ನರಸೀಪುರ ಪೊಲೀಸ್‌ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾರೆ.

ಟಿ. ನರಸೀಪುರ ಪುರಸಭೆಯ ಮಾಜಿ ಅಧ್ಯಕ್ಷನೂ ಆಗಿರುವ ಮದನ್‌ ರಾಜ್‌ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದು, ಆತನ ಜೊತೆ ನಾನಿದ್ದ ಫೋಟೋಗಳಿರುವ ಮೊಬೈಲ್‌ಗಳನ್ನು ನನ್ನಿಂದ ಕಿತ್ತುಕೊಂಡಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಾರೆ.

ಅಲ್ಲದೇ, ಮದುವೆಗೆ ಒತ್ತಾಯಿಸಿದಾಗ ಇಬ್ಬರು ವಿಷ ಕುಡಿಯೋಣ ಎಂದು ನನಗೆ ಮಾತ್ರ ವಿಷ ಕೊಟ್ಟು ಕೊಲೆಗೆ ಯತ್ನಿಸಿದ್ದರು. ಈಗ ಮತ್ತೊಬ್ಬ ಯುವತಿ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಯುವತಿ ಉಲ್ಲೇಖಿಸಿದ್ದಾಳೆ. ಈ ಸಂಬಂಧ ಮದನ್ ರಾಜ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಹುಡುಕಾಟ ನಡೆಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat