Dailyhunt Logo
  • Light mode
    Follow system
    Dark mode
    • Play Story
    • App Story

RCB ಸೋಲಿನ ಬೆನ್ನಲ್ಲೇ ಜೇಸನ್ ಹೋಲ್ಡರ್ ಕ್ಯಾಚ್ ವಿವಾದ : ಅಂಪೈರ್‌ ವಿರುದ್ದ ಕೊಹ್ಲಿ ಗರಂ!

Karnatakanewsbeat 2 weeks ago

ಹಮದಾಬಾದ್‌ : ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಐಪಿಎಲ್ 2026ರ ಪಂದ್ಯವು ಹತ್ತು ಹಲವು ರೋಚಕ ಘಟನೆಗಳಿಗೆ ಸಾಕ್ಷಿಯಾಗಿದೆ.

ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನುಭವಿಸಿದೆ.

ಆದರೆ, ಪಂದ್ಯದ ಫಲಿತಾಂಶಕ್ಕಿಂತ ಹೆಚ್ಚಾಗಿ ಆರ್‌ಸಿಬಿ ನಾಯಕ ರಜತ್ ಪಟೀದಾರ್‌ ಅವರ ಔಟ್ ಆದ ರೀತಿ ಮತ್ತು ಜೇಸನ್ ಹೋಲ್ಡರ್ ಹಿಡಿದ ವಿವಾದಾತ್ಮಕ ಕ್ಯಾಚ್ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ತೀರ್ಪಿನಿಂದ ಆಕ್ರೋಶಗೊಂಡ ವಿರಾಟ್ ಕೊಹ್ಲಿ ಮೈದಾನದ ಹೊರಗಿನ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ ಘಟನೆಯೂ ನಡೆದಿದೆ.

ಆರ್‌ಸಿಬಿ ನಾಯಕ ರಜತ್‌ ಪಟೀದಾರ್‌ ಕ್ಯಾಚ್‌ಅನ್ನು ಜೇಸನ್‌ ಹೋಲ್ಡರ್ ಪಡೆದುಕೊಂಡಿದ್ದರು. ಆದರೆ, ಆ ಚೆಂಡು ನೆಲಕ್ಕೆ ತಗುಲಿದೆ ಎಂದು ಆರ್‌ಸಿಬಿ ಕ್ಯಾಂಪ್ ಭಾವಿಸಿತ್ತು. ಥರ್ಡ್ ಅಂಪೈರ್ ಸರಿಯಾಗಿ ಪರಿಶೀಲಿಸದೆ ಔಟ್ ಎಂದು ಘೋಷಿಸಿದ್ದು, ಇಡೀ ತಂಡದ ಆಕ್ರೋಶಕ್ಕೆ ಕಾರಣವಾಯಿತು. ಪಂದ್ಯದ ನಂತರ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಈ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ.

ಐಪಿಎಲ್ 2026ರ ಪ್ರಸಕ್ತ ಸಾಲಿನ ಅತಿ ಹೆಚ್ಚು ವಿಕೆಟ್ ಪಡೆದಿರುವ ಭುವನೇಶ್ವರ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ದೊಡ್ಡ ಪರದೆಯ ಮೇಲೆ ದೃಶ್ಯಗಳನ್ನು ನೋಡಿದಾಗ ಚೆಂಡು ನೆಲಕ್ಕೆ ತಗುಲಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಅಂಪೈರ್ ಆ ವಿಡಿಯೋವನ್ನು ಇನ್ನೂ ಕೆಲವು ಆಂಗಲ್‌ಗಳಿಂದ ಸರಿಯಾಗಿ ಪರಿಶೀಲಿಸಬೇಕಿತ್ತು ಎಂಬುದು ನಮ್ಮ ಇಡೀ ತಂಡದ ಆಶಯವಾಗಿತ್ತು. ಚೆಂಡು ನೆಲಕ್ಕೆ ತಗುಲಿದಂತೆ ನಮಗೆ ಕಂಡಿತು, ಆದರೆ ಅಂಪೈರ್ ಏನು ಹೇಳಿದರು ಅಥವಾ ಅದು ನಿಯಮದ ವ್ಯಾಪ್ತಿಯಲ್ಲಿತ್ತೇ ಎಂಬ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ' ಎಂದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat