Dailyhunt

ಸಿಡಿಲು ಬಡಿದು ಇಬ್ಬರು ಯುವ ರೈತರು ಸಾವು!

ಬೀದರ್ : ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಬಿರುಗಾಳಿ, ಗುಡುಗು ಸಹಿತ ಮಳೆಯಾಗಿದ್ದು, ಜಮೀನಿಗೆ ತೆರಳಿದ ವೇಳೆ ಸಿಡಿಲು ಬಡಿದು ಇಬ್ಬರು ಯುವ ರೈತರು ಸಾವನ್ನಪ್ಪಿರುವ ದಾರುಣವಾಗಿ ಘಟನೆ ಭಾಲ್ಕಿ ತಾಲುಕಿನ ನಾವದಗಿ ಗ್ರಾಮದಲ್ಲಿ ನಡೆದಿದೆ. ನಾವದಗಿ ಗ್ರಾಮದ ರೇವಣಸಿದ್ದ (28) ಮತ್ತು ಜೇವರ್ಗಿಯ ಯಲ್ಲಾಲಿಂಗ (28) ಸಿಡಿಲಿಗೆ ಬಲಿಯಾದ ದುರ್ದೈವಿ ಯುವಕರಾಗಿದ್ದಾರೆ.

ಗುರುವಾರ ಸಂಜೆ (ಏ.23) ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಬಿರುಗಾಳಿ ಮಳೆ ಶುರುವಾಗಿದೆ. ಹೀಗಾಗಿ ಇಬ್ಬರು ರೈತರು ಜಮೀನಿನಲ್ಲಿದ್ದ ಮಾವಿನ ಮರದ ಕಳಗಡೆ ನಿಂತಿದ್ದರು. ಈ ವೇಳೆ ಮಾವಿನ ಮರಕ್ಕೆ ಸಿಡಿಲು ಅಪ್ಪಳಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಾಹಿತಿಗಳ ಪ್ರಕಾರ ರೇವಣಸಿದ್ದ ಹಾಗೂ ಯಲ್ಲಾಲಿಂಗ ಇಬ್ಬರು ಸಹಪಾಠಿ ಸ್ನೇಹಿತರು, ಕಲಬುರಗಿಯಲ್ಲಿ ಒಂದೇ ಕಡೆ ಓದುತ್ತಿದ್ದರು ಎಂದು ತಿಳಿದುಬಂದಿದೆ.. ಸ್ಥಳಕ್ಕೆ ಖಟಕ್ ಚಿಂಚೋಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಖಟಕ್ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ : ವಾಂಖೆಡೆಯಲ್ಲಿ ಸಂಜು ಬೆಂಕಿ ಶತಕ : MI ವಿರುದ್ಧ CSKಗೆ ಆಸರೆಯಾದ 'ಒಂಟಿ ಸಲಗ'

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat