Dailyhunt Logo
  • Light mode
    Follow system
    Dark mode
    • Play Story
    • App Story
'ಥ್ಯಾಂಕ್ ಯೂ ಫ್ರೆಂಡ್ಸ್'.. ಇನ್‌ಸ್ಟಾದಲ್ಲಿ ರಾತ್ರೋರಾತ್ರಿ ಧೂಳೆಬ್ಬಿಸಿದ ಪ್ರಧಾನಿ ಮೋದಿ!

'ಥ್ಯಾಂಕ್ ಯೂ ಫ್ರೆಂಡ್ಸ್'.. ಇನ್‌ಸ್ಟಾದಲ್ಲಿ ರಾತ್ರೋರಾತ್ರಿ ಧೂಳೆಬ್ಬಿಸಿದ ಪ್ರಧಾನಿ ಮೋದಿ!

ವದೆಹಲಿ : ಒಂದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಫಾಲೋವರ್ಸ್ ಸಂಖ್ಯೆ ಒಂದೇ ರಾತ್ರಿಯಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ತಡರಾತ್ರಿ ಹಂಚಿಕೊಂಡಿದ್ದ ವಿಡಿಯೋ ವೈರಲ್ ಆದ ಬಳಿಕ ಮೋದಿ ಅವರ ಇನ್ಸ್‌ಸ್ಟಾಗ್ರಾಮ್‌ ಖಾತೆಗೆ ಒಂದೇ ರಾತ್ರಿಯಲ್ಲಿ 11 ಲಕ್ಷಕ್ಕೂ ಹೆಚ್ಚು ಹೊಸ ಫಾಲೋವರ್ಸ್ ಸೇರ್ಪಡೆಯಾಗಿದ್ದಾರೆ.

ಒಟ್ಟು 1.1 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಏರಿಕೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬೆಳವಣಿಗೆ ಭಾರೀ ಚರ್ಚೆಗೆ ಕಾರಣವಾಗಿದೆ.

NEET ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ (ಜುಲೈ.23) ರಾತ್ರಿ ವಿದ್ಯಾರ್ಥಿಗಳಿಗಾಗಿ ಸೆಲ್ಫಿ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋಗೆ ದೇಶದಾದ್ಯಂತ ಯುವಜನರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಲಕ್ಷಾಂತರ ಯುವಕರು-ಯುವತಿಯರು ವಿಡಿಯೋ ವೀಕ್ಷಿಸಿ ತಮ್ಮ ಸಲಹೆಗಳು ಹಾಗೂ ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದರು. ಈ ಪ್ರತಿಕ್ರಿಯೆಗೆ ಕೃತಜ್ಞತೆ ಸಲ್ಲಿಸಲು ಪ್ರಧಾನಿ ಮೋದಿ ಇದೀಗ ಎರಡನೇ ವಿಡಿಯೋ ಹಂಚಿಕೊಂಡಿದ್ದಾರೆ.

"ಥ್ಯಾಂಕ್ ಯೂ ಫ್ರೆಂಡ್ಸ್" ಎಂದು ದೇಶದ ಯುವಜನತೆಗೆ ಧನ್ಯವಾದ ತಿಳಿಸಿರುವ ಪ್ರಧಾನಿ ಮೋದಿ, ಮೊದಲ ವಿಡಿಯೋಗೆ ಸಿಕ್ಕ ಭಾರೀ ಪ್ರತಿಕ್ರಿಯೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮೊದಲ ವಿಡಿಯೋ ನೋಡಿದ ಲಕ್ಷಾಂತರ ಯುವಕರು ಹಂಚಿಕೊಂಡಿರುವ ಸಲಹೆಗಳು ಹಾಗೂ ಪ್ರಮುಖ ಐಡಿಯಾಗಳನ್ನು ತಾವು ಗಮನಿಸಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಪೇಪರ್ ಸೋರಿಕೆ ದಂಧೆಯ ವಿರುದ್ಧ ಸರ್ಕಾರ ಕೈಗೊಳ್ಳಲಿರುವ ಕಠಿಣ ಕ್ರಮಗಳಿಗೆ ದೇಶದ ಯುವ ಪೀಳಿಗೆ ತೋರಿಸಿರುವ ಬೆಂಬಲವೇ ಸರ್ಕಾರಕ್ಕೆ ದೊಡ್ಡ ಶಕ್ತಿ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ತಡರಾತ್ರಿ ಹಂಚಿಕೊಂಡ ವಿಡಿಯೋ ಮೂಲಕ ದೇಶದ ಯುವ ಸಮುದಾಯದೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗಿದ್ದು, ಹೆಮ್ಮೆ ತಂದಿದೆ ಎಂದಿದ್ದಾರೆ.

ಇನ್ನು, ಯುವಕರ ಅಭಿಪ್ರಾಯಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಲಿದೆ. ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣ ಪಾರದರ್ಶಕವಾಗಿ ಮುಂದುವರಿಸಲು ಯುವಜನತೆಯೊಂದಿಗೆ ಇಂತಹ ನಿರಂತರ ಸಂವಾದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದೇ ವೇಳೆ, ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಒಂದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಒಂದೇ ರಾತ್ರಿಯಲ್ಲಿ 11 ಲಕ್ಷಕ್ಕೂ ಹೆಚ್ಚು ಹೊಸ ಫಾಲೋವರ್ಸ್ ಸೇರ್ಪಡೆಯಾಗಿರುವುದು ವಿಶೇಷ ಗಮನ ಸೆಳೆದಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat