Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರು: ಡೇ ಕೇರ್‌ನಲ್ಲಿ ಮಕ್ಕಳಿಗೆ ಹಿಂಸೆ, ಐವರು ಮಹಿಳೆಯರ ವಿರುದ್ಧ ಎಫ್‌ಐಆರ್

ಬೆಂಗಳೂರು: ಡೇ ಕೇರ್‌ನಲ್ಲಿ ಮಕ್ಕಳಿಗೆ ಹಿಂಸೆ, ಐವರು ಮಹಿಳೆಯರ ವಿರುದ್ಧ ಎಫ್‌ಐಆರ್

KarunadaSuddi 3 months ago

ಬೆಂಗಳೂರಿನ ಎಚ್‌ಎಎಲ್ ಕ್ಯಾಂಪಸ್‌ನಲ್ಲಿರುವ ಕ್ಯಾಪ್‌ಜೆಮಿನಿ ಕಂಪನಿಯ ಆವರಣದಲ್ಲಿ ನಡೆಯುತ್ತಿದ್ದ ಡೇ ಕೇರ್ ಕೇಂದ್ರದಲ್ಲಿ ಎರಡು ಮತ್ತು ಮೂರು ವರ್ಷ ವಯಸ್ಸಿನ ಮಕ್ಕಳಿಗೆ ದೈಹಿಕ ಹಿಂಸೆ ನೀಡಲಾಗಿದೆ ಎಂದು ಆರೋಪಿಸುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಐವರು ಮಹಿಳಾ ಆರೈಕೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಡೇ ಕೇರ್ ಕೇಂದ್ರದ ಒಳಗಡೆ ಚಿತ್ರೀಕರಿಸಲಾದ ವಿಡಿಯೊಗಳು ವಾಟ್ಸ್‌ಆಯಪ್‌ನಲ್ಲಿ ಹರಡಿದ ನಂತರ, ಸೋಮವಾರ ಚೈಲ್ಡ್ ಹೆಲ್ಪ್‌ಲೈನ್‌ಗೆ ದೂರು ನೀಡಲಾಗಿದ್ದು, ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ದೂರಿನ ಪ್ರಕಾರ, ವಿಡಿಯೊದಲ್ಲಿ ಮಕ್ಕಳು ಅಳುತ್ತಿರುವಾಗ ಅವರನ್ನು ಹೊಡೆಯಲಾಗುತ್ತಿದ್ದು, ಬೆದರಿಕೆ ಹಾಕಿ ದುರ್ವರ್ತನೆ ತೋರಲಾಗುತ್ತಿರುವ ದೃಶ್ಯಗಳು ಕಾಣಿಸುತ್ತವೆ ಎಂದು ತಿಳಿಸಲಾಗಿದೆ. ದೂರುದಾರರ ಪ್ರಕಾರ, ಈ ಆರೋಪಿತ ವರ್ತನೆ ಮಕ್ಕಳಲ್ಲಿ ತೀವ್ರ ಭಯ ಹುಟ್ಟಿಸಿದೆ.

ಮಕ್ಕಳು ಅತ್ತಾಗ ಅಥವಾ ತೊಂದರೆ ಕೊಟ್ಟಾಗ ಆರೈಕೆದಾರರು ಅವರನ್ನು ಬೆದರಿಸಿದ್ದು ಮಾತ್ರವಲ್ಲ, ಫ್ರಂಟ್ ಲೋಡಿಂಗ್ ವಾಷಿಂಗ್ ಮಷಿನ್‌ನೊಳಗೆ ಮಕ್ಕಳನ್ನು ಇರಿಸಿದ್ದಾರೆ, ವೆಸ್ಟರ್ನ್ ಶೈಲಿಯ ಶೌಚಾಲಯದ ಮೇಲೆಯಲಿಕೂರಿಸಿದ್ದಾರೆ, ಟಾಯ್ಲೆಟ್ ಜೆಟ್ ಸ್ಪ್ರೇ ಮೂಲಕ ಬಾಯಿಗೆ ನೀರು ಸಿಂಪಡಿಸಿದ್ದಾರೆ, ಬಾತ್‌ರೂಮ್‌ನಲ್ಲಿ ಬಂಧಿಸಿ ಬಾಯಿ ಮುಚ್ಚಿಕೊಂಡಿರಲು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಯಾಪ್‌ಜೆಮಿನಿ ಐಟಿ ಕಂಪನಿಯ ನೌಕರರು ಕೆಲಸದಲ್ಲಿರುವಾಗ ತಮ್ಮ ಮಕ್ಕಳನ್ನು ಬಿಡುವ ಸೌಲಭ್ಯವಾಗಿ ಈ ಡೇ ಕೇರ್ ಕೇಂದ್ರ ಕಂಪನಿಯ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪಿ ಮಹಿಳೆಯರನ್ನು ಇನ್ನೂ ವಿಚಾರಣೆಗೆ ಕರೆಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ದೂರು ಮತ್ತು ವಿಡಿಯೊ ಸಾಕ್ಷ್ಯಾಧಾರದ ಮೇಲೆ, ಐವರು ಮಹಿಳೆಯರ ವಿರುದ್ಧ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಚುರುಕುಗೊಂಡಿದೆ

Comment

Name

Email

Website

Turn on JavaScript to leave a comment.

Δ

Dailyhunt
Disclaimer: This content has not been generated, created or edited by Dailyhunt. Publisher: KarunadaSuddi