ಭಾರತೀಯ ಪಾಕಪದ್ಧತಿಯಲ್ಲಿ ಸಾಂಬಾರು ಹಾಗೂ ಮಸಾಲೆ ಪದಾರ್ಥಗಳು ಪ್ರಧಾನ ಪಾತ್ರವಹಿಸಿವೆ.ಜಾಯಿಕಾಯಿಯನ್ನು(nutmeg) ಸಾಂಬಾರು ಪದಾರ್ಥವಾಗಿ ಬಳಸುವುದು ರೂಢಿ. ಅದಲ್ಲದೆ ಇದರ ಎಣ್ಣೆಯನ್ನು ಸಹ ಸುಗಂಧ ದ್ರವ್ಯಗಳನ್ನು ತಯಾರಿಸುವಲ್ಲಿ ಜೊತೆಗೆ ಔಷಧಗಳಲ್ಲಿ ಬಳಸಲಾಗುತ್ತದೆ.
ಮಸಾಲೆ (Masala) ಪದಾರ್ಥಗಳು ರುಚಿ ಹಾಗೂ ಸುವಾಸನೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ ಹಾಗಾಗಿ ಪ್ರತಿಯೊಂದು ಭಾರತೀಯ ಪಾಕಗಳಲ್ಲಿ ಇವುಗಳನ್ನು ಕಡ್ಡಾಯವಾಗಿ ಬಳಸುತ್ತಾರೆ. ಇದು ಮೆಗ್ನೀಷಿಯಂ, ಮ್ಯಾಂಗನೀಸ್ ಮತ್ತು ತಾಮ್ರ ಹಾಗೂ ಇತರ ಅಗತ್ಯ ವಿಟಮಿನ್ ಗಳಾದ ಬಿ1, ಬಿ6 ಗಳನ್ನು ಹೊಂದಿದೆ,ಜತಿಫಲ್, ಜಾಕಾಯಿ, ಜಾಜಿಕಾಯಿ, ಜಾಪತ್ರೆ, ಜಾಧಿಕಾಯ್, ಅಟ್ರಮ್, ಜಾತಿಫಲಂ, ಸುರಭಿ, ಜವಂತ್ರಿ, ಜಾಫಲ್, ಜಾಯಿಕಾಯಿ ಹೀಗೆ ನಾನಾ ಹೆಸರುಗಳಿಂದ ಸಾಂಬಾರ ಪದಾರ್ಥಗಳಲ್ಲಿ ಒಂದಾದ ಈ ಜಾಯಿಕಾಯಿಯನ್ನು ಕರೆಯುತ್ತಾರೆ,ಜಾಯಿಕಾಯಿಯಿಂದ ಸಿಗುವ ಲಾಭಗಳ ಬಗ್ಗೆ ತಿಳಿಯೋಣ
ತೂಕ ಕಡಿಮೆ ಮಾಡಲು ಸಹಕಾರಿ ಜಾಪತ್ರೆ
ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ಜಾಪತ್ರೆಯನ್ನು ಸೇವಿಸಿ ಆಹಾರ ಸೇವಿಸುವುದರಿಂದ, ನಿಮ್ಮ ತೂಕ ಇಳಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಜಾಪತ್ರೆ ಉತ್ತಮ ಮದ್ದಾಗಿ ಕಾರ್ಯ ನಿರ್ವಹಿಸುತ್ತದೆ. ಜಾಪತ್ರೆಯಲ್ಲಿ ಹಸಿವನ್ನು ಕಡಿಮೆ ಮಾಡುವ ಗುಣವಿದೆ, ಆದ್ದರಿಂದ ನೀವು ಹತೋಟಿಯಲ್ಲಿ ಆಹಾರವನ್ನು ಸೇವನೆ ಮಾಡಬಹುದು, ಇದರಿಂದ ನಿಮ್ಮ ತೂಕ ಇಳಿಕೆಯಾಗುತ್ತದೆ.ಜಾಯಿಕಾಯಿ ಬಳಸುವುದರಿಂದ ಮಧುಮೇಹ ಸಮಸ್ಯೆ ನಿಯಂತ್ರಣವಾಗಿ ಮೆಟಬಾಲಿಸಂ ಪ್ರಕ್ರಿಯೆ ಹೆಚ್ಚಾಗುತ್ತದೆ.
ಮಧುಮೇಹ ನಿಯಂತ್ರಣ
ಜಾಯಿಕಾಯಿಯಲ್ಲಿ ನಿಮ್ಮ ದೇಹದ ಬೊಜ್ಜನ್ನು ಕರಗಿಸುವ ಅದ್ಭುತ ತಂತ್ರಗಾರಿಕೆ ಅಡಗಿದೆ. ಹಾಗಾಗಿ ನಿಮಗೆ ಎದುರಾಗುವ ಟೈಪ್ - 2 ಮಧುಮೇಹವನ್ನು ಸುಲಭವಾಗಿ ನಿಯಂತ್ರಣ ಮಾಡುತ್ತದೆ.ಕೇವಲ ವಯಸ್ಸಾದವರು ಮಾತ್ರವಲ್ಲದೆ ಈಗಿನ ಕಾಲದಲ್ಲಿ ವಯಸ್ಕರು ಮತ್ತು ಮಕ್ಕಳು ಕೂಡ ಬಹಳ ಚಿಕ್ಕ ವಯಸ್ಸಿಗೆ ಮಧುಮೇಹದ ಸಮಸ್ಯೆಗೆ ಗುರಿ ಆಗುತ್ತಿದ್ದಾರೆ.
ಮೆದುಳಿನ ಆರೋಗ್ಯ ಸುಧಾರಿಸುತ್ತದೆ
ಒಂದು ಚಿಟಿಕೆ ಜಾಯಿಕಾಯಿ( ಜಾಪತ್ರೆ) ಸೇವಿಸುವುದರಿಂದ ಅದು ಖಿನ್ನತೆ ನಿರೋಧಕವಾಗಿದ್ದು ನರಗಳನ್ನು ಶಾಂತಗೊಳಿಸುವ ಮೂಲಕ ಒತ್ತಡದಿಂದ ಮುಕ್ತಿ ನೀಡುತ್ತದೆ. ಇದು ಅಡಾಪ್ಟೊಜೆನ್ ಆಗಿ ಕೆಲಸ ಮಾಡುತ್ತದೆ, ಇದು ಮಂಪರುಕಾರಕ ಪರಿಣಾಮ ಹೊಂದಿದ್ದು, ಒತ್ತಡ ಹಾಗೂ ಆತಂಕದಿಂದ ಉಪಶಮನ ನೀಡುತ್ತದೆ.
ಚರ್ಮದ ಕಾಂತಿಗೆ ಸಹಾಯಕ
ಜಾಯಿಕಾಯಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ.ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಚರ್ಮವನ್ನು ಅಲ್ಮಾ ವೈಲೆಟ್ ರೇಸ್‌ನಿಂದ ರಕ್ಷಿಸುತ್ತದೆ. ಇದು ಮೊಡವೆ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು
ಉರಿಯೂತವನ್ನು ಕಡಿಮೆ ಮಾಡುತ್ತದೆ
ಇದು ಹೊಟ್ಟೆ ನೋವು ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಜಾಯಿಕಾಯಿಯಲ್ಲಿ ಇರುವ ಉರಿಯೂತ ಶಮನಕಾರಿ ಗುಣವು ಗಂಟು ನೋವು ಮತ್ತು ಸಂಧಿವಾತದಿಂದ ಕಾಣಿಸಿಕೊಳ್ಳುವ ಉರಿಯೂತ ಕಡಿಮೆ ಮಾಡುವುದು.
ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವುದು
ಜಾಯಿಕಾಯಿಯು ಕೊಲೆಸ್ಟ್ರಾಲ್ ತಗ್ಗಿಸುವ ಗುಣ ಹೊಂದಿದೆ ಎನ್ನುವುದು ಇಲಿಗಳ ಮೇಲೆ ನಡೆಸಿರುವಂತಹ ಅಧ್ಯಯನದಿಂದ ಸಾಬೀತಾಗಿದೆ. ಅಧಿಕ ಕೊಲೆಸ್ಟ್ರಾಲ್ ನಿಂದಾಗಿ ಯಕೃತ್ ನಲ್ಲಿ ಕಂಡುಬರುವ ವಿಷಕಾರಿ ಅಂಶವನ್ನು ಹೊರಹಾಕಲು ಜಾಯಿಕಾಯಿ ಪ್ರಮುಖ ಪಾತ್ರ ವಹಿಸುತ್ತದೆ.ಜಾಪತ್ರೆ ಪರಿಮಳ ಹೊಂದಿರುತ್ತದೆ. ಕೆಂಪು ಅಥವಾ ಕಿತ್ತಳೆ ಬಣ್ಣದಲ್ಲಿ ಜಾಪತ್ರೆ ಹೂವು ಕಾಣುತ್ತದೆ. ಅಸ್ತಮಾ, ಶೀತ, ಕೆಮ್ಮು ಮತ್ತು ಜ್ವರಕ್ಕೆ ಕಾರಣವಾಗುವ ವೈರಸ್‌ಗಳ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ. ಬಿಪಿಯನ್ನು ಕಡಿಮೆ ಮಾಡುವುದಲ್ಲದೆ ಹೃದಯದ ಆರೋಗ್ಯಕ್ಕೂ ಉಪಕಾರಿ.

