Dailyhunt Logo
  • Light mode
    Follow system
    Dark mode
    • Play Story
    • App Story

ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಪತ್ರಿಕೆಗಳು ಇಂದಿಗೂ ಓದುಗರ ನಂಬಿಕೆ ಕಾಯ್ದುಕೊಂಡಿವೆ- ಹಿರಿಯ ಪತ್ರಕರ್ತ ಎಸ್ .ಚಂದ್ರಕಾಂತ್

Klive News 1 week ago

ಮಂಗಳೂರು ಸಮಾಚಾರ್ ಮೊದಲ ಕನ್ನಡ ಪತ್ರಿಕೆಯಾಗಿದ್ದು, ಇದು ಆರಂಭವಾದ ದಿನವನ್ನು ಪತ್ರಿಕಾ ದಿನಾಚರಣೆಯಾಗಿ ಆಚರಿಸ ಲಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಹೇಳಿದರು.ಪತ್ರಿಕಾ ದಿನಾಚರಣೆ ಅಂಗವಾಗಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪತ್ರಿಕೆಗಳು ಈವರೆಗೆ ಸಮಾಜ ಜಾಗೃತಿಗೆ , ಸರ್ಕಾರಗಳನ್ನು ಎಚ್ಚರಿಸಲು, ಸ್ವಾತಂತ್ರ್ಯ ಹೋರಾಟಕ್ಕೆ ಪ್ರಮುಖವಾಗಿ ಬಳಕೆಯಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಪತ್ರಿಕಾ ಕ್ಷೇತ್ರವು ಪತ್ರಿಕೋದ್ಯಮವಾಗಿ ಬದಲಾಗಿದೆ ಎಂದರು.
ಇಂದು ಪತ್ರಿಕೆಗಳು ಹೊಸ ಹೊಸ ಸವಾಲು ಗಳನ್ನು ಎದುರಿಸುವಂತಾಗಿವೆ. ಸಾಮಾಜಿಕ ಜಾಲತಾಣಗಳು, ಸಮೂಹ ಮಾಧ್ಯಮಗಳು ತ್ವರಿತವಾಗಿ ಸಮಾಜದ ಮೇಲೆ ಪ್ರಭಾವ ಬೀರುತ್ತಿವೆ. ಇವುಗಳ ನಡುವೆಯೂ ಪತ್ರಿಕೆಗಳು ಓದುಗರ ನಂಬಿಕೆಯನ್ನು ಕಾಯ್ದುಕೊಂಡಿವೆ ಎಂದರು.
ರೋಟರಿ ಮಾಜಿ ಸಹಾಯಕ ಗೌರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಪತ್ರಿಕಾ ಕ್ಷೇತ್ರದಲ್ಲಿ ಹಿರಿಯರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಸ್. ಚಂದ್ರಕಾಂತ್ ಜಿಲ್ಲೆಯ ಪತ್ರಿಕಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಇಂದಿನ ಯುವ ಪತ್ರಕರ್ತರಿಗೆ ಮಾದರಿಯಾಗಿದ್ದಾರೆ ಎಂದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕೆ. ಶೇಷಗಿರಿ,ಯವರು ಮಾತನಾಡುತ್ತಾ ಚಂದ್ರಕಾಂತ್ ರವರು ಸಾಕಷ್ಟು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದು ಅವರ ಸಾಧನೆ ತುಂಬಾ ವಿಶೇಷವಾಗಿದೆ ಇಂದು ಪತ್ರಿಕೋದ್ಯಮ ನಡೆಸುವುದು ಒಂದು ದೊಡ್ಡ ಸವಾಲಾಗಿದೆ ಎಂದು ನುಡಿದರು ಕಾರ್ಯದರ್ಶಿ ಆರ್. ಮನೋಹರ್ , ಮಾಜಿ ಅಧ್ಯಕ್ಷ ಸತೀಶ್ ಚಂದ್ರ,ಸಂತೋಷ ನಿರ್ದೇಶಕರಾದ ಸಿ.ಕೆ. ವಿಜಯಕುಮಾರ್ ಪತ್ರಿಕಾ ಬಳಗದ ವಿ.ಟಿ. ಅರುಣ್, ಅಭಿನಂದನ್, ಬಿ.ಚನ್ನಬಸಪ್ಪ ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Klive.News