Dailyhunt Logo
  • Light mode
    Follow system
    Dark mode
    • Play Story
    • App Story
ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್ : 2025-26 ನೇ ಸಾಲಿನಲ್ಲಿ₹66.73 ಲಕ್ಷ ನಿವ್ವಳ ಲಾಭ :  ಅಧ್ಯಕ್ಷ ಕೆ.ರಂಗನಾಥ್

ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್ : 2025-26 ನೇ ಸಾಲಿನಲ್ಲಿ₹66.73 ಲಕ್ಷ ನಿವ್ವಳ ಲಾಭ : ಅಧ್ಯಕ್ಷ ಕೆ.ರಂಗನಾಥ್

Klive News 1 week ago

ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ಬ್ಯಾಂಕ್ 2025-26ನೇ ಸಾಲಿನಲ್ಲಿ 66.73 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ.

ಈ ಹಿನ್ನೆಲೆಯಲ್ಲಿ ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ಹಂಚಿಕೆ ಮಾಡಲು ಆಗಸ್ಟ್ 9ರಂದು ನಡೆದ 2025-26ನೇ ಸಾಲಿನ 114ನೇ ಮಹಾಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಸೆಪ್ಟೆಂಬರ್ 1, 2026ರಿಂದ ಬ್ಯಾಂಕಿನ ವ್ಯವಹಾರದ ವೇಳೆಯಲ್ಲಿ ಅರ್ಹ ಸದಸ್ಯರು ಡಿವಿಡೆಂಡ್ ಪಡೆಯಬಹುದಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೆ. ರಂಗನಾಥ್ ತಿಳಿಸಿದ್ದಾರೆ.

ಡಿವಿಡೆಂಡ್ ಪಡೆಯುವ ಸದಸ್ಯರು ಕಡ್ಡಾಯವಾಗಿ ಬ್ಯಾಂಕ್ ಪಾಸ್‌ಬುಕ್ ಅಥವಾ ಬ್ಯಾಂಕ್ ಗುರುತಿನ ಚೀಟಿ ಹಾಜರುಪಡಿಸಬೇಕು.

ಇನ್ನು ಕೆವೈಸಿ ನೀಡದಿರುವ ಸದಸ್ಯರು ಕಡ್ಡಾಯವಾಗಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಸಲ್ಲಿಸುವಂತೆ ಬ್ಯಾಂಕ್ ಮನವಿ ಮಾಡಿದೆ.

ಉಳಿತಾಯ ಖಾತೆ ನಿರ್ವಹಣೆಗೆ ಪಾನ್ ಕಾರ್ಡ್ ಕೂಡ ಕಡ್ಡಾಯವಾಗಿರುತ್ತದೆ ಎಂದು ತಿಳಿಸಲಾಗಿದೆ.

ಅದೇ ರೀತಿ ಸದಸ್ಯರ ವಿಳಾಸ ಅಥವಾ ದೂರವಾಣಿ ಸಂಖ್ಯೆಯಲ್ಲಿ ಬದಲಾವಣೆಯಾಗಿದ್ದರೆ, ಅರ್ಜಿ ಮೂಲಕ ಬ್ಯಾಂಕಿಗೆ ಮಾಹಿತಿ ನೀಡುವಂತೆ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ. ರಂಗನಾಥ್ ಮನವಿ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Klive.News