Dailyhunt Logo
  • Light mode
    Follow system
    Dark mode
    • Play Story
    • App Story

Siddharamaiah ಮುಖ್ಯಮಂತ್ರಿ ಸಿಂಹಾಸನ ನಶ್ವರ.ಜನತೆಯ ಹೃದಯ ಸಿಂಹಾಸನ ಶಾಶ್ವತ- ಸಿದ್ಧರಾಮಯ್ಯ.

Klive News 1 month ago

Siddharamaiahರಾಜಕೀಯ ಅಧಿಕಾರ ಎನ್ನುವುದು ಜನರ ಸೇವೆ ಮಾಡಲು ಒದಗಿ ಬಂದ ಅವಕಾಶದ ಭಾಗ್ಯ ಎಂದು ನಾನು ತಿಳಿದುಕೊಂಡವನು.
ಮುಖ್ಯಮಂತ್ರಿಯ ಪದತ್ಯಾಗ ಮಾಡಿದ ದಿನದಿಂದ ಹೋದಲ್ಲಿ, ಬಂದಲ್ಲಿ ಜನತೆ ವ್ಯಕ್ತಪಡಿಸುತ್ತಿರುವ ಪ್ರೀತಿ, ಅಭಿಮಾನ, ವಿಶ್ವಾಸವನ್ನು ನೋಡಿದರೆ ಅಧಿಕಾರವನ್ನು ಬಳಸಿಕೊಂಡು ಜಗಮೆಚ್ಚುವ ರೀತಿಯಲ್ಲಿ ಜನಸೇವೆ ಮಾಡಿದ್ದೇನೆ ಎಂಬ ಸಾರ್ಥಕ್ಯದ ಭಾವನೆ ಮೂಡಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.ಪದತ್ಯಾಗದ ನಂತರ ಮೊದಲಸಲ ಹುಟ್ಟೂರಿಗೆ ಕಾಲಿಟ್ಟಾಗ

ಅವರ ಪ್ರತಿಕ್ರಿಯೆ ಇದಾಗಿದೆ.
ಅಲ್ಲಿ ಸೇರಿದ್ದ ಜನಸಾಗರ, ಅವರು ತೋರಿದ ಪ್ರೀತಿ-ಅಭಿಮಾನ ಕಂಡು ಮೂಕವಿಸ್ಮಿತನಾಗಿದ್ದೇನೆ ಎಂದಿದ್ದಾರೆ.

Siddharamaiahಅಧಿಕಾರ, ಸಂಪತ್ತು ಕಾಲ ಬದಲಾದಂತೆ ಕಳೆದು ಹೋಗಬಹುದು, ಜನರ ಪ್ರೀತಿ ನಿರಂತರ. ನನ್ನ ಸಾರ್ವಜನಿಕ ಬದುಕಿನಲ್ಲಿ ನನ್ನನ್ನು ಪ್ರೀತಿಸುವ ದೊಡ್ಡ ಜನಸಮೂಹವನ್ನೇ ಸಂಪಾದಿಸಿದ್ದೇನೆ ಎನ್ನುವ ಹೆಮ್ಮೆ ನನ್ನದು.
ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನತೆಯ ಹೃದಯ‌ಸಿಂಹಾಸನ ಶಾಶ್ವತ. ಅಲ್ಲಿಂದ ನನ್ನನ್ನು ಯಾರೂ ಕೆಳಗಿಳಿಸಲಾರರು. ಅದು ನನ್ನ ಮತ್ತು ನಾನು ನಂಬುವ ಜನತಾ ಜನಾರ್ಧನರ ನಡುವಿನ‌ ಶಾಶ್ವತ ಒಪ್ಪಂದ.

ನಾಡಿನ ಉದ್ದಗಲಕ್ಕೂ ಯಾವ ನಿರೀಕ್ಷೆಯೂ ಇಲ್ಲದೆ ಪ್ರೀತಿ - ಅಕ್ಕರೆ ತೋರುತ್ತಿರುವ ಪ್ರೀತಿಯ ಬಂಧುಗಳ ಸೇವೆಗೆ ನಾನು ಸದಾ ಬದ್ಧ. ಮತ್ತೊಮ್ಮೆ ಎಲ್ಲರಿಗೂ ನನ್ನ ತುಂಬು ಹೃದಯದ ಕೃತಜ್ಞತೆಗಳು ಎಂದು ಮಾಜಿ ಸೀಎಂ ಸಿದ್ಧರಾಮಯ್ಯ ಧನ್ಯತೆ ಅರ್ಪಿಸಿದ್ದಾರೆ

Dailyhunt
Disclaimer: This content has not been generated, created or edited by Dailyhunt. Publisher: Klive.News