Friday, 31 Jul, 7.45 pm Mahithi Mitra

Posts
ರಾಜ್ಯದಲ್ಲಿ ಅನ್ ಲಾಕ್-3 ಆಗಸ್ಟ್​​ 1ರಿಂದ ಜಾರಿ: ನೈಟ್ ಮತ್ತು ಸಂಡೇ ಕರ್ಫ್ಯೂ ಬಂದ್

  ರಾಜ್ಯದಲ್ಲಿ ಮೂರನೇ ಹಂತದ ಅನ್​ಲಾಕ್​ ಜಾರಿಗೆ ಬರಲಿದೆ. ಈ ವೇಳೆ ಹಿಂದಿದ್ದ ಕೆಲವು ನಿರ್ಬಂಧಗಳನ್ನು ಸಡಿಲಿಸಿದ್ದು, ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನೇ ಯಥಾವತ್ತಾಗಿ ಜಾರಿಗೊಳಿಸಿರುವ ಸರ್ಕಾರ, ರಾಜ್ಯದಲ್ಲಿ ಹೇರಿಕೆ ಮಾಡಿದ್ದ ನೈಟ್ ಕರ್ಫ್ಯೂ ಮತ್ತು ಸಂಡೇ ಕರ್ಫ್ಯೂ ರದ್ದುಗೊಳಿಸಿದೆ. ಆಗಸ್ಟ್ 1 ರಿಂದ ರಾಜ್ಯದಲ್ಲಿ ಈ ನಿಯಮ ಅನುಷ್ಠಾನಕ್ಕೆ ಬರುತ್ತೆ.

ಆಗಸ್ಟ್ 2ರಿಂದ ಭಾನುವಾರದ ಲಾಕ್‌ಡೌನ್ ರದ್ದಾಗಲಿದೆ ಎಂದು ಸಿಎಂ‌ ಕಚೇರಿ ಸ್ಪಷ್ಟಪಡಿಸಿದೆ.

ಕಂಟೈನ್‌ಮೆಂಟ್ ವಲಯ ಬಿಟ್ಟು ಹೊರಗಡೆ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.

ಜಿಮ್ ಹಾಗೂ ಯೋಗ ತರಬೇತಿ ಕೇಂದ್ರಗಳನ್ನು ಆಗಸ್ಟ್​​ 5ರಿಂದ ತೆರೆಯಬಹುದು.

ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಆಗಸ್ಟ್ 31ರವರೆಗೆ ತೆರೆಯುವಂತಿಲ್ಲ. ಅದೇ ರೀತಿ ಸಿನಿಮಾ ಮಂದಿರಗಳು, ಈಜು ಕೊಳ, ಮನರಂಜನಾ ಪಾರ್ಕ್, ಚಿತ್ರಮಂದಿರ, ಬಾರ್, ಸಭಾ ಭವನಗಳಿಗೆ ನಿರ್ಬಂಧ ಮುಂದುವರೆದಿದೆ.

ಅಂತಾರಾಷ್ಟ್ರೀಯ ವಿಮಾನ ಹಾರಾಟ, ಮೆಟ್ರೋ ರೈಲು, ಧಾರ್ಮಿಕ ಸಭೆ, ಸಾರ್ವಜನಿಕ ಸಭೆ-ಸಮಾರಂಭಕ್ಕೆ ಅವಕಾಶ ಇರುವುದಿಲ್ಲ. ಅಂತಾರಾಜ್ಯ ಹಾಗೂ ಅಂತರ್ ಜಿಲ್ಲಾ ಪ್ರಯಾಣಕ್ಕೆ ಯಾವುದೇ ನಿರ್ಬಂಧಗಳಿಲ್ಲ.

ಯಾವುದೇ ವಿಶೇಷ ಅನುಮತಿ, ಪಾಸ್​ಗಳ ಅಗತ್ಯ ಇರುವುದಿಲ್ಲ. ಆದರೆ ರಾಜ್ಯಕ್ಕೆ ಬರುವ ಪ್ರಯಾಣಿಕರು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಯನ್ನು ಅನುಸರಿಸಬೇಕು.

ಮದುವೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು 50 ಜನರಿಗಿದ್ದ ಅವಕಾಶದ ವಿಚಾರದಲ್ಲಿ ಯಾವುದೇ ಸಡಿಲಿಕೆ ಮಾಡಿಲ್ಲ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Mahithi Mitra
Top