Wednesday, 02 Dec, 4.18 pm Masth Magaa

ರಾಜ್ಯ
ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ 6 ಮೀನುಗಾರರು ಶವವಾಗಿ ಪತ್ತೆ!

masthmagaa.com:

ಮಂಗಳೂರು ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ನಾಪತ್ತೆಯಾಗಿದ್ದ 6 ಮೀನುಗಾರರು ಶವವಾಗಿ ಪತ್ತೆಯಾಗಿದ್ದಾರೆ. ನಾಪತ್ತೆಯಾಗಿದ್ದವರಿಗಾಗಿ ಕರಾವಳಿ ರಕ್ಷಣಾ ಪಡೆ ಮತ್ತು ಮುಳುಗು ತಜ್ಞರು ಶೋಧಕಾರ್ಯ ನಡೆಸಿದ್ದರು. ಕಾರ್ಯಾಚರಣೆ ವೇಳೆ ನಿನ್ನೆ ಇಬ್ಬರ ಮೃತದೇಹಗಳು ಪತ್ತೆಯಾಗಿತ್ತು. ಇಂದು ಉಳಿದ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಈ ಮೂಲಕ ಶೋಧಕಾರ್ಯ ಕೂಡ ಅಂತ್ಯವಾಗಿದೆ. ಅವಘಡ ಸಂಭವಿಸುವಾಗ ದೋಣಿಯಲ್ಲಿ 22 ಜನ ಇದ್ದರು. ಅವರಲ್ಲಿ 16 ಜನರನ್ನ ರಕ್ಷಣೆ ಮಾಡಲಾಗಿದೆ.

-masthmagaa.com

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Masth Magaa
Top