Wednesday, 02 Dec, 6.29 pm Masth Magaa

ಎಲ್ಲಾ ಸುದ್ದಿ
DEC-2: ಷೇರುಪೇಟೆಯಲ್ಲಿ ಕುಸಿತ.. ಚಿನ್ನ-ಬೆಳ್ಳಿ ಬೆಲೆ ಆಕಾಶಕ್ಕೆ!

masthmagaa.com:

ಮಂಗಳವಾರ ಸಾರ್ವಕಾಲಿಕ ದಾಖಲೆ ಬರೆದಿದ್ದ ಸೆನ್ಸೆಕ್ಸ್ ಇವತ್ತು 37 ಅಂಕ ಕುಸಿದು 44,618ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 5 ಅಂಕ ಏರಿಕೆ ಕಂಡು 13,114 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 13 ಪೈಸೆ ಕುಸಿದು ₹73.81 (73 ರೂಪಾಯಿ 81 ಪೈಸೆ) ಆಗಿದೆ.

ಚಿನ್ನ ಮತ್ತು ಬೆಳ್ಳಿ ಬೆಲೆ ನೋಡೋದಾದ್ರೆ, ಇವತ್ತು 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 578 ರೂಪಾಯಿ ಜಾಸ್ತಿಯಾಗಿ ₹49,170 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 2,242 ರೂಪಾಯಿ ಜಾಸ್ತಿಯಾಗಿ ₹63,206 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರುವುದಿಲ್ಲ.

-masthmagaa.com

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Masth Magaa
Top