ಎಲ್ಲಾ ಸುದ್ದಿ
ಜಡ್ಜ್ಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಾಜಿ ಜಡ್ಜ್ ಅರೆಸ್ಟ್!

masthmagaa.com:
ಚೆನ್ನೈ: ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ನ ಕೆಲ ಹಾಲಿ ಮತ್ತು ಮಾಜಿ ನ್ಯಾಯಮೂರ್ತಿಗಳು 'ಕೋರ್ಟ್ನ ಮಹಿಳಾ ಸಿಬ್ಬಂದಿ ಮತ್ತು ಮಹಿಳಾ ಜಡ್ಜ್ಗಳಿಗೆ ಲೈಂಗಿಕ ಕಿರುಕುಳ' ನೀಡಿದ್ದಾರೆ ಅಂತ ಆರೋಪಿಸಿ ವಿಡಿಯೋ ಮಾಡಿದ್ದ ನಿವೃತ್ತ ಜಡ್ಜ್ ಸಿ.ಎಸ್. ಕರ್ಣನ್ ಅರೆಸ್ಟ್ ಆಗಿದ್ದಾರೆ. ಇವರನ್ನ ಚೆನ್ನೈನಲ್ಲಿ ಬಂಧಿಸಲಾಗಿದೆ. ಸಿ.ಎಸ್.ಕರ್ಣನ್ ಚೆನ್ನೈ ಮತ್ತು ಕೋಲ್ಕತ್ತಾ ಹೈಕೋರ್ಟ್ನ ಮಾಜಿ ಜಡ್ಜ್ ಆಗಿದ್ದಾರೆ. ಇವರು ಹಾಲಿ ಮತ್ತು ನಿವೃತ್ತ ನ್ಯಾಯಮೂರ್ತಿಗಳನ್ನ ನಿಂದಿಸುವ ವಿಡಿಯೋಗಳನ್ನ ಹಾಕಿದ್ದರು. ವಿಡಿಯೋದಲ್ಲಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ನ ಕೆಲ ಜಡ್ಜ್ಗಳು ಮಹಿಳಾ ಜಡ್ಜ್ ಮತ್ತು ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದರು. ಅಂತಹ ಕೆಲ ಜಡ್ಜ್ಗಳ ಹೆಸರನ್ನ ಕೂಡ ಉಲ್ಲೇಖಿಸಿದ್ದರು. ಈ ಸಂಬಂಧ ಬಾರ್ ಕೌನ್ಸಿಲ್ ಆಫ್ ತಮಿಳುನಾಡು ಹೈಕೋರ್ಟ್ ಮೊರೆ ಹೋಗಿತ್ತು.
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನ 7 ಸದಸ್ಯರ ಪೀಠ 2017ರಲ್ಲಿ ಕರ್ಣನ್ಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ನಿವೃತ್ತಿಗೆ 6 ತಿಂಗಳು ಬಾಕಿ ಇರುವಾಗಲೇ ಈ ಶಿಕ್ಷೆ ವಿಧಿಸಲಾಗಿತ್ತು. ಕರ್ಣನ್ ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಭ್ರಷ್ಟಾಚಾರ ಆರೋಪಗಳನ್ನ ಎದುರಿಸಿದ್ದಾರೆ. ತಾನು ದಲಿತ ಎಂಬ ಕಾರಣಕ್ಕೆ ಎಲ್ಲರೂ ಟಾರ್ಗೆಟ್ ಮಾಡ್ತಿದ್ದಾರೆ ಅಂತ ಕರ್ಣನ್ ಈ ಹಿಂದೆ ಹೇಳಿಕೊಂಡಿದ್ದರು.
-masthmagaa.com