ಎಲ್ಲಾ ಸುದ್ದಿ
ನಾಯಿ ಮಾಂಸ ಮತ್ತೆ ಮಾರಲು ಅನುಮತಿ.. ಎಲ್ಲಿ!?

masthmagaa.com:
ನಾಗಾಲ್ಯಾಂಡ್ನಲ್ಲಿ ಈ ಹಿಂದೆ ಬ್ಯಾನ್ ಆಗಿದ್ದ ನಾಯಿ ಮಾಂಸ ಮಾರಾಟವನ್ನ ಮತ್ತೆ ಆರಂಭಿಸಲು ಗುವಾಹಟಿ ಕೋರ್ಟ್ ಅನುಮತಿ ನೀಡಿದೆ. ಕಳೆದ ಜುಲೈನಲ್ಲಿ ನಾಗಾಲ್ಯಾಂಡ್ ಸರ್ಕಾರ ನಾಯಿ ಮಾಂಸ ಆಮದು ಮತ್ತು ಮಾರಾಟದ ಮೇಲೆ ನಿಷೇಧ ಹೇರಿತ್ತು. ಆದ್ರೆ ಸರ್ಕಾರದ ಈ ನಿರ್ಧಾರವನ್ನ ವಿರೋಧಿಸಿ ನಾಯಿ ಮಾಂಸ ಮಾರಾಟ ವ್ಯಾಪಾರಸ್ಥರೊಬ್ಬರು ಗುವಾಹಟಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿರುವ ಗುವಾಹಟಿ ಹೈಕೋರ್ಟಿನ ಕೋಹಿಮಾ ಪೀಠವು ಸರ್ಕಾರ ವಿಧಿಸಿರುವ ನಿಷೇಧವನ್ನ ತಡೆಹಿಡಿದು ಮುಂದಿನ ಆದೇಶದವರೆಗೂ ನಾಯಿ ಮಾಂಸ ಮಾರಾಟ ಮಾಡಲು ಅನುಮತಿ ನೀಡಿದೆ.
ಈ ನಾಯಿ ಮಾಂಸದಲ್ಲಿ ಔಷಧೀಯ ಗುಣವಿದೆ ಅನ್ನೋ ನಂಬಿಕೆ ನಾಗಾಲ್ಯಾಂಡಿನ ಕೆಲವೊಂದು ಸಮುದಾಯಗಳಲ್ಲಿದೆ.
-masthmagaa.com
Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Masth Magaa