Tuesday, 24 Nov, 6.22 pm Masth Magaa

ಎಲ್ಲಾ ಸುದ್ದಿ
ಸಾರ್ವಕಾಲಿಕ ದಾಖಲೆ ಬರೆದ ಸೆನ್ಸೆಕ್ಸ್-ನಿಫ್ಟಿ.. ಚಿನ್ನ-ಬೆಳ್ಳಿ ಬೆಲೆ ಭಾರಿ ಇಳಿಕೆ

masthmagaa.com:

ಒಂದು ವಾರದ ಹಿಂದಷ್ಟೇ ಸಾರ್ವಕಾಲಿಕ ದಾಖಲೆ ಬರೆದಿದ್ದ ಸಂವೇದಿ ಸೂಚ್ಯಂಕ ಇಂದು ಮತ್ತೆ ದಾಖಲೆ ಬರೆದಿದೆ. ಮಂಗಳವಾರ 446 ಅಂಕ ಏರಿಕೆ ಕಂಡ ಸೆನ್ಸೆಕ್ಸ್​ 44,523ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇದು ಈವರೆಗಿನ ಹೈಯೆಸ್ಟ್ ನಂಬರ್. ನಿಫ್ಟಿ ಕೂಡ 129 ಅಂಕ ಏರಿಕೆ ಕಂಡು 13,055 ಆಗಿ ಸಾರ್ವಕಾಲಿಕ ದಾಖಲೆ ಬರೆದಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯ 10 ಪೈಸೆ ಗಳಿಕೆ ಕಂಡು 74 ರೂಪಾಯಿ 01 ಪೈಸೆ ಆಗಿದೆ.

ಚಿನ್ನ-ಬೆಳ್ಳಿ ವಿಚಾರಕ್ಕೆ ಬಂದ್ರೆ, ಇವತ್ತು 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 1,329 ರೂಪಾಯಿ ಕಮ್ಮಿಯಾಗಿ 48,975 ರೂಪಾಯಿ ಆಗಿದೆ. 1 ಕೆಜಿ ಬೆಳ್ಳಿ ಬೆಲೆ 1,782 ರೂಪಾಯಿ ಕಮ್ಮಿಯಾಗಿ 59,704 ರೂಪಾಯಿ ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರುವುದಿಲ್ಲ.

-masthmagaa.com

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Masth Magaa
Top