ಎಲ್ಲಾ ಸುದ್ದಿ
ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಸ್ಟೋರಿ: ಅಸಲಿಗೆ ನಡೆದಿದ್ದೇನು?

masthmagaa.com:
ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಕೇಸ್ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಡಿಸೆಂಬರ್ 1ರಂದು ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಸ್ವತಃ ವರ್ತೂರು ಪ್ರಕಾಶ್ ಈ ಸಂಬಂಧ ದೂರು ದಾಖಲಿಸಿದ ಬಳಿಕವೇ ಕಿಡ್ನ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ದೂರಿನಲ್ಲಿ ನವೆಂಬರ್ 25ರಂದು ತನ್ನನ್ನ ಕಿಡ್ನ್ಯಾಪ್ ಮಾಡಲಾಗಿತ್ತು. ಕಿಡ್ನ್ಯಾಪರ್ಸ್ ತನ್ನನ್ನ ರಿಲೀಸ್ ಮಾಡೋದಕ್ಕೂ ಮೊದಲೇ 48 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ ಅಂತ ಉಲ್ಲೇಖಿಸಲಾಗಿದೆ. ಈ ಸಂಬಂಧ ಪೊಲೀಸರು ತನಿಖೆಗೆ ಇಳಿದಿದ್ಧಾರೆ. ವರ್ತೂರು ಪ್ರಕಾಶ್ ಕೂಡ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿಯಾಗಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಕಿಡ್ನ್ಯಾಪ್ ನಡೆದಿದ್ದು ಹೇಗೆ?
ನವೆಂಬರ್ 25 ಸಂಜೆ 7 ಗಂಟೆ ಸುಮಾರಿಗೆ ವರ್ತೂರು ಪ್ರಕಾಶ್ ಕೋಲಾರ ಜಿಲ್ಲೆಯಲ್ಲಿರುವ ತಮ್ಮ ಫಾರ್ಮ್ ಹೌಸ್ನಿಂದ ಮದುವೆ ಕಾರ್ಯಕ್ರಮವೊಂದಕ್ಕೆ ಹೊರಟಿದ್ದಾರೆ. ತಮ್ಮ ತೋಟದ ಮನೆಯಿಂದ ಅರ್ಧ ಕಿಲೋ ಮೀಟರ್ ದೂರ ಹೋಗುತ್ತಿದ್ದಂತೆ ಹಿಂದೆ ಒಂದು ಕಾರು, ಮುಂದೆ ಒಂದು ಕಾರು ಅವರನ್ನ ಫಾಲೋ ಮಾಡುತ್ತೆ. ಬಳಿಕ 8 ಮಂದಿ ಅಪಹರಣಕಾರರ ತಂಡ ವರ್ತೂರು ಪ್ರಕಾಶ್ ಕಾರನ್ನು ಅಡ್ಡ ಹಾಕುತ್ತೆ. ಬಳಿಕ ವರ್ತೂರು ಪ್ರಕಾಶ್ ಮತ್ತು ಕಾರು ಚಾಲಕನ ಮೇಲೆ ಹಲ್ಲೆ ನಡೆಸಿ, ಇವರ ಕಾರಿನಲ್ಲೇ ಇಬ್ಬರನ್ನ ಬಂಧಿಯನ್ನಾಗಿಸಿ, ಮುಖಕ್ಕೆ ಮಂಕಿ ಕ್ಯಾಪ್ ಹಾಕಿ ಕಿಡ್ನ್ಯಾಪ್ ಮಾಡ್ತಾರೆ. ಹಣಕ್ಕೆ ಬೇಡಿಕೆ ಇಡ್ತಾರೆ. ಕಿಡ್ನ್ಯಾಪರ್ಸ್ ಒತ್ತಡಕ್ಕೆ ಮಣಿದ ವರ್ತೂರು ಪ್ರಕಾಶ್ ತಮ್ಮ ಸ್ನೇಹಿತರಿಗೆ ಕಾಲ್ ಮಾಡಿ ಹಣ ಕೇಳ್ತಾರೆ. ಸ್ನೇಹಿತನಿಂದ 48 ಲಕ್ಷ ಹಣ ಪಡೆದು ಅಪಹರಣಕಾರರಿಗೆ ಕೊಡ್ತಾರೆ. ನಂತರದಲ್ಲಿ ವರ್ತೂರು ಪ್ರಕಾಶ್ ಅವರ ಕಾರು ಚಾಲಕ ತಪ್ಪಿಸಿಕೊಳ್ತಾರೆ. ಬಳಿಕ ವರ್ತೂರು ಪ್ರಕಾಶ್ ಅವರನ್ನ ಕೂಡ ಅಪಹರಣಕಾರರು ಹೊಸಕೋಟೆ ಬಳಿ ಬಿಟ್ಟು ಹೋಗ್ತಾರೆ ಅಂತ ಹೇಳಲಾಗ್ತಿದೆ. ಆದ್ರೆ ವರ್ತೂರು ಪ್ರಕಾಶ್ ಅವರ ಕಾರಿನಲ್ಲಿ ಲೇಡಿಸ್ ವೇಲ್ ಮಾದರಿಯ ಬಟ್ಟೆ ಪತ್ತೆಯಾಗಿದೆ. ಹೀಗಾಗಿ ಇದೊಂದು ಹನಿಟ್ರ್ಯಾಪ್ ಕೇಸ್ ಕೂಡ ಆಗಿರಬಹುದು ಅಂತ ಹೇಳಲಾಗ್ತಿದೆ. ಆದ್ರೆ ಪೊಲೀಸರ ತನಿಖೆ ಬಳಿಕವೇ ಎಲ್ಲವೂ ಬಯಲಾಗಲಿದೆ.
-masthmagaa.com